ಶುಕ್ರವಾರ, ಜನವರಿ 22, 2021
29 °C

ಚಾಕೊಲೇಟ್‌ ಸಮೇತ ಕ್ಯಾಮೆರಾ ಕದ್ದೊಯ್ದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಂತಿನಗರದ ಲಕ್ಷ್ಮಿ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ಕಳ್ಳತನ ಎಸಗಿರುವ ದುಷ್ಕರ್ಮಿಗಳು, ಚಾಕೊಲೇಟ್‌ ಜೊತೆ ಬೇಕರಿಯ ಸಿ.ಸಿ.ಟಿ.ವಿ ಕ್ಯಾಮೆರಾವನ್ನೂ ಕದ್ದುಕೊಂಡು ಹೋಗಿದ್ದಾರೆ.

ಕಳ್ಳತನ ಸಂಬಂಧ ‘ಸಪ್ನ ಮ್ಯಾಜಿಕ್ ಓವನ್’ ಬೇಕರಿಯ ಪಾಲುದಾರ ಪಿ.ಕೆ. ಫಹೀದ್ ಎಂಬುವರು ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ.

‘ಜ. 9ರಂದು ರಾತ್ರಿ ಯಾರೋ ದುಷ್ಕರ್ಮಿಗಳು ಬೇಕರಿಯ ಷಟರ್ ಬಾಗಿಲು ತೆರೆದು ಕೃತ್ಯ ಎಸಗಿದ್ದಾರೆ. ₹45 ಸಾವಿರ ನಗದು, ₹5 ಸಾವಿರ ಮೌಲ್ಯದ ಚಾಕೊಲೇಟ್ ಕದ್ದಿದ್ದಾರೆ. ಅದರ ಜೊತೆಗೆ ಸಿ.ಸಿ.ಟಿ.ವಿ ಕ್ಯಾಮೆರಾದ ಡಿವಿಆರ್ ಹಾಗೂ ಹಾರ್ಡ್‌ ಡಿಸ್ಕ್‌ ಸಹ ಕದ್ದೊಯ್ದಿದ್ದಾರೆ’ ಎಂದು ದೂರಿನಲ್ಲಿ ಫಹೀದ್ ತಿಳಿಸಿದ್ದಾರೆ.

‘ಲಕ್ಷ್ಮಿ ರಸ್ತೆಯಲ್ಲಿರುವ ಜಬ್ಬೀರ್ ಹುಸೇನ್ ಎಂಬುವರ ಲಸ್ಸಿ ಮಳಿಗೆಯಲ್ಲೂ ಕಳ್ಳತನ ಆಗಿದೆ. ಇದೊಂದು ಸರಣಿ ಕಳ್ಳತನದಂತೆ ಕಾಣುತ್ತಿದೆ’ ಎಂದು ಅವರು ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು