ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಕ್ರೀದ್‌: ಮಾಂಸದ ಬದಲು ಹಣ ದಾನ ಮಾಡಿ’

Last Updated 16 ಜುಲೈ 2020, 21:40 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಬಕ್ರೀದ್‌ ವೇಳೆ ಬಡ ಮುಸ್ಲಿಮರಿಗೆ ಮಾಂಸ ನೀಡುವ ಬದಲು, ಇದೇ ಮೊತ್ತದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕು’ ಎಂದು ಬೆನ್ಸನ್‌ ಟೌನ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಕೆ. ಅರ್ಷದ್‌ ಮನವಿ ಮಾಡಿದ್ದಾರೆ.

‘ಹಬ್ಬಕ್ಕಾಗಿ ಕುರಿಗಳನ್ನು ಖರೀದಿಸಲು ಸಾವಿರಾರು ಜನರು ಮಾರುಕಟ್ಟೆಗೆ ಹೋಗುತ್ತಾರೆ. ಈ ವೇಳೆ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೆ, ಮಾಂಸ ಪಡೆಯಲು ಹಲವು ಕಡೆಯಿಂದ ನೂರಾರು ಜನರು ಬರುತ್ತಾರೆ. ಈ ವೇಳೆ ಸೋಂಕು ಮತ್ತಷ್ಟು ವ್ಯಾಪಕವಾಗಿ ಹರಡುವ ಸಾಧ್ಯತೆ ಇರುತ್ತದೆ. ಕುರಿಗಳನ್ನು ಖರೀದಿಸಿ, ಮಾಂಸ ದಾನ ಮಾಡುವ ಬದಲು, ಸೇವಾ ಕಾರ್ಯ ನಡೆಸುವುದಕ್ಕೆ ಹಣ ನೀಡುವ ಮೂಲಕ ಹಬ್ಬ ಆಚರಿಸಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT