ಸೋಮವಾರ, ಸೆಪ್ಟೆಂಬರ್ 21, 2020
27 °C

ವಾಕ್‌-ಶ್ರವಣ ಚಿಕಿತ್ಸೆಗೆ ‘ಸಂಚಾರ ಕ್ಲಿನಿಕ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಹೊರವಲಯದಲ್ಲಿರುವ ವಾಕ್ ಮತ್ತು ಶ್ರವಣದೋಷ ಹೊಂದಿರುವವರಿಗೆ ಚಿಕಿತ್ಸೆ ನೀಡುವ ಸಲುವಾಗಿ ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಹಾಗೂ ರೋಟರಿ ಮಿಡ್‌ಟೌನ್ ಸಂಸ್ಥೆಯ ಆಶ್ರಯದಲ್ಲಿ ರೂಪಿಸಿರುವ ಸಂಚಾರಿ ಚಿಕಿತ್ಸಾ ಕೇಂದ್ರವನ್ನು ರೋಟರಿ ಸಂಸ್ಥೆಯ ಗವರ್ನರ್‌ ಸಮೀರ್ ಹರಿಯಾನಿ ಉದ್ಘಾಟಿಸಿದರು.

ಹೊರವಲಯದ ವ್ಯಕ್ತಿಗಳನ್ನು ಸಂಪರ್ಕಿಸುವುದು ಹಾಗೂ ಅವರಿಗೆ ಚಿಕಿತ್ಸೆ ಕೊಡುವುದು ಸವಾಲಿನ ಕೆಲಸ. ಹೀಗಾಗಿ, ಸಂಸ್ಥೆಗೆ ಬರಲು ಕಷ್ಟ ಆಗುವವರಿಗೆ ಅನುಕೂಲ ಕಲ್ಪಿಸಲು ಸಂಚಾರಿ ಕೇಂದ್ರ ಆರಂಭಿಸಲಾಗಿದೆ. ಬಸ್‌ನಲ್ಲಿ ನಾಲ್ಕು ಕಿವಿ ತಪಾಸಣೆ ಮಾಡುವ ಸಾಧನಗಳನ್ನು ಅಳವಡಿಸಲಾಗಿದೆ. ಯಂತ್ರಗಳ ಸಹಾಯದಿಂದ ಶ್ರವಣದೋಷವನ್ನು, ದೇಹದ ಸಮತೋಲನದ ತೊಂದರೆ ಹಾಗೂ ತಲೆ ಸುತ್ತು ಬರುವ ವ್ಯಕ್ತಿಗಳ ಪರೀಕ್ಷೆ ಮಾಡಬಹುದು’ ಎಂದು ಸಂಸ್ಥೆಯ ಮುಖ್ಯಸ್ಥ ಡಾ.ಎಂ.ಎಸ್‌.ವೆಂಕಟೇಶ್‌ ಮಾಹಿತಿ ನೀಡಿದರು.

ನಗರದ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ಜನರ ವಾಕ್ ಶ್ರವಣದೋಷವನ್ನು ಪತ್ತೆಹಚ್ಚಿ ಪರಿಹಾರ ನೀಡುವಲ್ಲಿ ಇದು ಸಹಕಾರಿಯಾಗಲಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು