ಬುಧವಾರ, ಏಪ್ರಿಲ್ 1, 2020
19 °C

ಸಂಬಳದ ಹಣ ಕೇಳಿದ್ದಕ್ಕೆ ಕೊಂದು, ಶವ ಸುಟ್ಟ ಆರೋಪಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ದೇಹವನ್ನು ಸುಟ್ಟುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು  ಬಂಧಿಸಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಚಿಕ್ಕಕಟ್ಟಿಗೆನಹಳ್ಳಿ ನಿವಾಸಿ ಟಿ. ಕೃಷ್ಣ ಅಲಿಯಾಸ್ ಟೋರಿ ಕೃಷ್ಣ (43) ಮತ್ತು ಹಲಸೂರಿನ ಕೃಷ್ಣ ಅಲಿಯಾಸ್ ಮಾಯಾಕೃಷ್ಣ (41) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಆಟೊ, ಒಂದು ಟಿವಿಎಸ್, ಸ್ಟಾರ್ ಸಿಟಿ ಬೈಕ್, ಚಾಕು ಮತ್ತು ಸೈಜ್ ಕಲ್ಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಮಾರ್ಚ್ 10ರಂದು ಶ್ರೀನಿವಾಸ್ ಎಂಬವರನ್ನು ಕೊಲೆ ಮಾಡಿ, ಮೃತದೇಹವನ್ನು ಸುಟ್ಟು ಹಾಕಿದ್ದರು. ಈ ಹಿನ್ನೆಲೆಯಲ್ಲಿ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.

ಮೃತ ಶ್ರೀನಿವಾಸ್ ಮತ್ತು ಆರೋಪಿಗಳಿಗೆ ಸಂಬಳ ನೀಡುವ ವಿಚಾರದಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು. ಇದೇ 9ರಂದು ಶ್ರೀನಿವಾಸ್, ಆರೋಪಿಗಳಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಸಂಬಳದ ಹಣ ನೀಡುವಂತೆ ಕೇಳಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಆರೋಪಿಗಳ ಪೈಕಿ ಟಿ. ಕೃಷ್ಣ, ಇದೇ 9ರಂದು ಮಾದಪ್ಪ ಲೇಔಟ್ ಬಳಿ ಇರುವ ತರುಣ್ ಪ್ಯಾಕರ್ಸ್ ಆ್ಯಂಡ್ ಮೂವರ್ಸ್ ಬಳಿಗೆ ತೆರಳಿ  ಶ್ರೀನಿವಾಸ್​ ಜೊತೆ ಜಗಳ ಮಾಡಿದ್ದ.

ಅದೇ ದಿನ ರಾತ್ರಿ ಶ್ರೀನಿವಾಸ್ ಮಲಗಿದ್ದ ಸ್ಥಳಕ್ಕೆ ಹೋಗಿದ ಟಿ. ಕೃಷ್ಣ, ತಲೆ ಮೇಲೆ ಮೂರು ಬಾರಿ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಮರುದಿನ  ಮಾಯಾಕೃಷ್ಣನನ್ನೂ ಜೊತೆಗೆ ಕರೆದುಕೊಂಡ ಟಿ. ಕೃಷ್ಣ, ಮೃತದೇಹವನ್ನು ರಾಂಪುರ ಕೆರೆಗೆ ಹಾಕಲು ಯತ್ನಿಸಿದ್ದಾನೆ. ಆದರೆ, ಶವವನ್ನು ಎತ್ತಲು ಸಾಧ್ಯವಾಗದೆ ಇಬ್ಬರೂ ಆ ಯತ್ನ ಕೈಬಿಟ್ಟಿದ್ದರು.

ಬಳಿಕ ಅದೇ ದಿನ ರಾತ್ರಿ 11.30ರ ಸುಮಾರಿಗೆ ಆರೋಪಿಗಳಿಬ್ಬರೂ ಸೇರಿ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದಾರೆ. ಆರೋಪಿಗಳು ಈ ಹಿಂದೆ ಕೂಡಾ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಆರೋಪಿಗಳನ್ನು ತೀವ್ರ ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು