ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಪುರದಲ್ಲಿ 20 ಸೆಂ.ಮೀ ಮಳೆ; ಕಾರುಗಳು ಜಲಾವೃತ

Last Updated 24 ಸೆಪ್ಟೆಂಬರ್ 2018, 6:02 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿಯಿಂದ ಎಡೆಬಿಡದೆಮಳೆ ಸುರಿಯುತ್ತಿದ್ದು, ಅಂಜನಪುರ ಬಡಾವಣೆಯಲ್ಲಿ ಅಧಿಕ20 ಸೆಂ.ಮೀ ಮಳೆಯಾಗಿದೆ.

ಭಾನುವಾರ ಬೆಳಿಗ್ಗೆ 8.30 ರಿಂದ ಸೋಮವಾರ ಬೆಳಿಗ್ಗೆ 8.30ರವರೆಗೆ ನಗರದಲ್ಲಿ ಒಟ್ಟು 5.3 ಸೆಂ.ಮೀ ಮಳೆ ಸುರಿದಿದೆ. ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರಿನಲ್ಲಿ ಗುಡುಗು ಸಹಿತಭಾರಿ ಮಳೆ ಸುರಿದಿದ್ದು, ಉಳಿದ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಗೊಟ್ಟಿಗೆರೆಯಲ್ಲಿ 19 ಸೆಂ.ಮೀ ಹಾಗೂ ಉತ್ತರಹಳ್ಳಿಯಲ್ಲಿ 16 ಸೆಂ.ಮೀ ಮಳೆ ದಾಖಲಾಗಿದೆ.

ಶಿವಗಿರಿ ಅಪಾರ್ಟ್‌ಮೆಂಟ್‌ನ ನೆಲಮಹಡಿಗೆ ನೀರು ನುಗ್ಗಿದ್ದು, ಕಾರು, ಬೈಕ್‌ಗಳುಸಂಪೂರ್ಣ ಜಲಾವೃತವಾಗಿವೆ. ಕೋರಮಂಗಲ, ಸಿಲ್ಕ್‌ಬೋರ್ಡ್‌, ಹೊಸಕೆರೆ ಹಳ್ಳಿಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜೆ.ಪಿ. ನಗರ ಬಳಿಯ ಸೌಪರ್ಣಿಕ ಹಾಗೂ ವೆಗ ಸಿಟಿ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದೆ.ಬನ್ನೇರುಗಟ್ಟ, ಗೊಟ್ಟಿಗೆರೆಯ ರಸ್ತೆಗಳಲ್ಲಿ ಎರಡು ಮೂರು ಅಡಿಗಳವೆರೆಗೆ ನೀರು ನಿಂತಿದ್ದು, ಪ್ರವಾಹ ಸ್ಥಿತಿ ಉಂಟಾಗಿದೆ.

ಧರೆಗುರುಳಿದ 60 ವರ್ಷದ ಅರಳಿ ಮರ

ಅಗ್ರಹಾರ ದಾಸರಹಳ್ಳಿ ಬಳಿ 60 ವರ್ಷದ ಅರಳಿ ಮರ ಧರೆಗುರುಳಿದೆ. ಇನ್ನೂ ಹೊರವತೃಲ ರಸ್ತೆಯ ನಾಗರಭಾವಿ ಬಳೆ ಗೋಡೆ ಕುಸಿದೆ. ಭಾರಿ ಮಳೆಗೆ ನಗರದ ವಿವಿಧ ಭಾಗಗಳಲ್ಲಿ ಮರಗಳು ಬಿದ್ದಿದ್ದು, ಯಾವುದೇ ಸಾವು–ನೋವು ಸಂಭವಿಸಿಲ್ಲಎಂದು ಬಿಬಿಎಂಪಿ ಸಿಬ್ಬಂದಿ ತಿಳಿಸಿದರು.

ತಮಿಳುನಾಡಿನಿಂದ ದಕ್ಷಿಣ ಒಳನಾಡಿನ ಕಡೆಗೆ ಬೀಸುವ ಗಾಳಿಯ ಒತ್ತಡ ಕಡಿಮೆಯಾಗಿದ್ದರಿಂದ (ಟ್ರಫ್‌) ಮಳೆಯಾಗುತ್ತಿದ್ದು, ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಇನ್ನೂ ಎರಡು ದಿನಗಳು ಮಳೆಯಾಗಲಿದೆ. ಮೈಸೂರು, ತುಮಕೂರು, ಕೊಡಗು, ಹಾಸನ, ಚಿಕ್ಕಬಳ್ಳಾಪುರದಲ್ಲೂ ಉತ್ತಮ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಉಸ್ತುವರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದರು.

26ರಿಂದ ರಾಜ್ಯದಾದ್ಯಂತ ಮಳೆ

ಸದ್ಯ ದಕ್ಷಿಣ ಒಳನಾಡಿನಲ್ಲಿ ಸುರಿಯುತ್ತಿರುವ ಮಳೆ 26ರಿಂದ ರಾಜ್ಯಕ್ಕೆ ವ್ಯಾಪಿಸಲಿದೆ. ಕರಾವಳಿ ಸೇರಿಹಲವು ಭಾಗಗಳಲ್ಲಿ ಚದುರಿದಂತ ಮಳೆಯಾಗಲಿದೆ. ಕೊಡಗಿನಲ್ಲಿ ಮತ್ತೆ ಭಾರಿ ಪ್ರಮಾಣದ ಮಳೆಯ ಮುನ್ಸೂಚನೆಯಿಲ್ಲ ಎಂದು ವಿವರಿಸಿದರು.

ಸೋಮವಾರ ರಾಜ್ಯದ ಯಾವ ಭಾಗದಲ್ಲಿ ಎಷ್ಟೆಷ್ಟು ಮಳೆ ಸುರಿದಿದೆ ಎಂಬುದನ್ನು ರಾಜ್ಯ ವಿಪತ್ತು ಉಸ್ತುವರಿ ಕೇಂದ್ರ ನಕ್ಷೆಯ ಮೂಲಕ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT