‘ಸುಧಾರಣೆಗೆ ನಿರಂತರ ಪ್ರಯತ್ನ’
‘ನಗರದಲ್ಲಿ 1.40 ಕೋಟಿ ಜನಸಂಖ್ಯೆಯಿದ್ದು 1.20 ಕೋಟಿ ವಾಹನಗಳಿವೆ. ಆ ಪೈಕಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳದ್ದೇ ಸಿಂಹಪಾಲು. ತೀವ್ರ ಸಮಸ್ಯೆಗಳಿರುವ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ನಿರಂತರ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಕಾರ್ತಿಕ್ ರೆಡ್ಡಿ ತಿಳಿಸಿದರು.
‘ಸಿಲ್ಕ್‌ಬೋರ್ಡ್‌ನಿಂದ ಸರ್ಜಾಪುರ ಹಾಗೂ ಹೆಬ್ಬಾಳ ರಸ್ತೆಯಲ್ಲಿ ಉಂಟಾಗುತ್ತಿರುವ ದಟ್ಟಣೆ ಸಮಸ್ಯೆ ಬಗೆಹರಿಸಲು ಬಿಬಿಎಂಪಿ, ಬೆಸ್ಕಾಂ ಹಾಗೂ ಜಲಮಂಡಳಿ ನೆರವು ಪಡೆಯಲಾಗುತ್ತಿದೆ. ಟೆಕ್‌ಪಾರ್ಕ್ ಬಳಿ ಪ್ರತಿನಿತ್ಯ ₹1.50 ಲಕ್ಷ ವಾಹನಗಳು ಸಂಚರಿಸುತ್ತಿವೆ. ಸುಗಮ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಆಲೋಚಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.