ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು ವಿವಿ ಆವರಣದಲ್ಲಿ ವಾಹನಗಳ ಭರಾಟೆ: ಶೈಕ್ಷಣಿಕ ಚಟುವಟಿಕೆಗೆ ಕಿರಿಕಿರಿ

Published : 18 ಮಾರ್ಚ್ 2025, 23:30 IST
Last Updated : 18 ಮಾರ್ಚ್ 2025, 23:30 IST
ಫಾಲೋ ಮಾಡಿ
Comments
ಭಾರಿ ಸರಕು ವಾಹನಗಳನ್ನು ನಿಷೇಧಿಸಲಾಗಿದೆ. ಆದರೂ ಟ್ರಾಫಿಕ್ ಸಮಸ್ಯೆ ಇದೆ. ವಿದ್ಯಾರ್ಥಿಗಳು ತರಗತಿಗಳಿಗೆ ತೆರಳಲು ಸಮಸ್ಯೆಯಾಗುತ್ತದೆ‌. ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಯೂ ಚರ್ಚಿಸಿದ್ದೇವೆ. ಅವರು ಶಾಶ್ವತ ಪರಿಹಾರದ ಕುರಿತು ಭರವಸೆ ನೀಡಿದ್ದಾರೆ. ದಟ್ಟಣೆ ಸಮಸ್ಯೆ ಬಗೆಹರಿದರೆ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ.
 ಜಯಕರ ಎಸ್.ಎಂ, ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ
ವಿಶ್ವವಿದ್ಯಾಲಯದಲ್ಲಿ ವಾಹನಗಳ ಓಡಾಟ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ತೆರಳಲು ಸಮಸ್ಯೆಯಾಗುತ್ತದೆ. ಹಾಸ್ಟೆಲ್ ರಸ್ತೆಗಳಲ್ಲಿ ತಡರಾತ್ರಿ ಖಾಸಗಿ ವಾಹನಗಳ ಸಂಚಾರದಿಂದ ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸುತ್ತದೆ. ಅಲ್ಲದೇ ಕಾರುಗಳಲ್ಲಿ ಬಂದು ವಿಶ್ವವಿದ್ಯಾಲಯದ ಆವರಣದಲ್ಲಿ ಕಸ ಎಸೆಯುವಂತಹ ಘಟನೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶ್ವವಿದ್ಯಾಲಯ ಆವರಣದಲ್ಲಿ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಬೇಕು
 ಸುಗುಣ, ಸಂಶೋಧನಾ ವಿದ್ಯಾರ್ಥಿನಿ, ಬೆಂಗಳೂರು ವಿಶ್ವವಿದ್ಯಾಲಯ
ಸುರಂಗ ರಸ್ತೆ; ಚರ್ಚೆ ಹಂತದಲ್ಲಿದೆ
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ವಾಹನಗಳ ದಟ್ಟಣೆ, ಅಪಘಾತ ಪ್ರಕರಣಗಳನ್ನು ತಪ್ಪಿಸಲು ಸುರಂಗ ರಸ್ತೆ (ಅಂಡರ್‌ ಪಾಸ್‌) ನಿರ್ಮಿಸುವ ಕುರಿತು ಉನ್ನತ ಶಿಕ್ಷಣ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಚಿಂತನೆ ನಡೆಸಿದ್ದವು. ಅದಿನ್ನೂ ಚರ್ಚೆ ಹಂತದಲ್ಲೇ ಇದೆ. ಅಪಘಾತ ತಪ್ಪಿಸಲು ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ಆವರಣದ ರಸ್ತೆಗಳನ್ನು ಬಂದ್‌ ಮಾಡಲಾಗುತ್ತಿದೆ. ಮೈಸೂರು ರಸ್ತೆ–ಉಲ್ಲಾಳು ವೃತ್ತ ಸಂಪರ್ಕಿಸುವ ಮುಖ್ಯ ರಸ್ತೆ ಮಾತ್ರ ತೆರೆದಿರುತ್ತದೆ. ಆದರೆ, ಇದರಿಂದ ಕಾಲೇಜು ಅವಧಿಯಲ್ಲಿ ಉಂಟಾಗುವ ವಾಹನ ದಟ್ಟಣೆ ಸಮಸ್ಯೆ ಬಗೆಹರಿಯುವುದಿಲ್ಲ ಎನ್ನುತ್ತಾರೆ ಸಿಬ್ಬಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT