ಬೆಂಗಳೂರು: ಬಿಬಿಸಿ ಮೀಡಿಯಾ ಆ್ಯಕ್ಷನ್ ದತ್ತಿ ಸಂಸ್ಥೆಯು ಹಳೆ ವಸ್ತ್ರದ ಮರುಬಳಕೆ ಅಭಿಯಾನದಡಿ ‘ಬಿಸಿನೆಸ್ ಕಾರ್ಡ್’ ಪರಿಚಯಿಸಿದ್ದು, ಸಂಗ್ರಹಿಸಿ ಸಂಸ್ಕರಿಸುವ ಬಟ್ಟೆಯನ್ನು ಚಿಂದಿ ಆಯುವವರಿಗೆ ಒದಗಿಸುವ ಮೂಲಕ ಅವರಿಗೆ ನೆರವಾಗುತ್ತದೆ.

ಈ ಕಾರ್ಡ್ ಹಳೆ ವಸ್ತ್ರಗಳ ಮರುಬಳಕೆಯ ಜಾಲವನ್ನು ರೂಪಿಸಲಿದೆ. ‘ಹಳೆಯ ಬಟ್ಟೆಗಳಿವೆಯೇ ?’ ಎಂಬ ಶೀರ್ಷಿಕೆಯಡಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ವಸ್ತ್ರ ತ್ಯಾಜ್ಯವು ಭೂಮಿಗೆ ಸೇರುವುದನ್ನು ತಪ್ಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಹಳೆಯ ವಸ್ತ್ರಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಹ ಈ ಅಭಿಯಾನ ನೆರವಾಗಲಿದೆ.

‘ವಸ್ತ್ರ ತ್ಯಾಜ್ಯವು ಭೂಮಿಗೆ ಸೇರುವುದನ್ನು ತಪ್ಪಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಿಂದ ಚಿಂದಿ ಆಯುವವರು ಆರ್ಥಿಕ ಸ್ವಾವಲಂಬನೆ ಸಾಧಿಸಿ, ಘನತೆಯ ಜೀವನ ನಡೆಸಬಹುದಾಗಿದೆ. ನಗರದ ವಿವಿಧ ಒಣ ತ್ಯಾಜ್ಯ ಸಂಗ್ರಹ ಕೆಂದ್ರಗಳ ವಿವರ ಹಾಗೂ 50 ಕೆ.ಜಿ.ಗಿಂತ ಅಧಿಕ ವಸ್ತ್ರ ತ್ಯಾಜ್ಯವಿದ್ದಲ್ಲಿ ಮನೆ ಬಾಗಿಲಿನಲ್ಲಿಯೇ ಸಂಗ್ರಹಕ್ಕೆ ಸಂಬಂಧಿಸಿದಂತೆ ವಾಟ್ಸ್ ಆ್ಯಪ್ ಸಂಖ್ಯೆ 9741730854ಕ್ಕೆ ಸಂಪರ್ಕಿಸಬಹುದು’ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸೋಮ ಕತಿಯಾರ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.