ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5.5 ಎಕರೆ ಒತ್ತುವರಿ ತೆರವು

Last Updated 11 ಫೆಬ್ರುವರಿ 2021, 18:26 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ಹೋಬಳಿಯಲ್ಲಿ ಕೋಗಿಲು ಪ್ರದೇಶದಲ್ಲಿ ಒತ್ತುವರಿಯಾಗಿದ್ದ ಐದೂವರೆ ಎಕರೆ ಜಾಗವನ್ನು ಬಿಬಿಎಂಪಿಯ ಅಧಿಕಾರಿಗಳು ಮತ್ತೆ ಸ್ವಾಧೀನಕ್ಕೆ ಪಡೆದಿದ್ದಾರೆ.

‘ಈ ಜಾಗವನ್ನು ಬಯೋಮೀಥೇನ್‌ ಘಟಕ ಸ್ಥಾಪನೆಗಾಗಿ ಕಾಯ್ದಿರಿಸಲಾಗಿತ್ತು. ಇಲ್ಲಿ ಯಾರೋ ಕಿಡಿಗೇಡಿಗಳು ಅನಧಿಕೃತವಾಗಿ ಬಡಾವಣೆ ನಿರ್ಮಿಸಲು ಮುಂದಾಗಿದ್ದರು. ತಾತ್ಕಾಲಿಕ ಕಟ್ಟಡವನ್ನೂ ನಿರ್ಮಿಸಿ ಆವರಣ ಗೋಡೆಯನ್ನೂ ಕಟ್ಟಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ನಾವು ಆ ಕಟ್ಟಡ ಹಾಗೂ ಗೋಡೆಯನ್ನು ನೆಲಸಮ ಮಾಡಿದ್ದೇವೆ. ಜಾಗಕ್ಕೆ ಬೇಲಿ ಹಾಕಿ ಸ್ವಾಧೀನಕ್ಕೆ ಪಡೆದಿದ್ದೇವೆ. ಒತ್ತುವರಿದಾರರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಬಿಬಿಎಂಪಿಯ ಜಂಟಿ ಆಯುಕ್ತ (ಕಸ ವಿಲೇವಾರಿ) ಸರ್ಫರಾಜ್‌ ಖಾನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇಲ್ಲಿ ₹ 10 ಕೋಟಿ ವೆಚ್ಚದಲ್ಲಿ ಬಯೊಮೀಥೇನ್‌ ಘಟಕವನ್ನು ನಿರ್ಮಿಸಲಾಗುತ್ತದೆ. ಈ ಘಟಕವು ನಿತ್ಯ 50 ಟನ್‌ ಕಸವನ್ನು ಬಳಸಿ ಅಡುಗೆ ಅನಿಲ ಉತ್ಪಾದಿಸಲಿದೆ. ಇದರ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎರಡು ವರ್ಷಗಳ ಒಳಗೆ ಘಟಕ ನಿರ್ಮಾಣವಾಗಲಿದೆ’ ಎಂದರು. ಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT