ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎ’ ಖಾತೆ ಅಕ್ರಮ: 24ರೊಳಗೆ ಮಾಹಿತಿ ನೀಡಲು ಸೂಚನೆ

Last Updated 14 ಮಾರ್ಚ್ 2023, 22:57 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ‘ಎ’ ಖಾತೆಯ ಮಾಹಿತಿಯನ್ನು ಸಲ್ಲಿಸಲು 63 ಕಂದಾಯ ವಿಭಾಗಗಳ ಸಹಾಯಕ ಕಂದಾಯ ಅಧಿಕಾರಿಗಳಿಗೆ ಮಾರ್ಚ್‌ 24ರವರೆಗೆ ಗಡುವು ನೀಡಲಾಗಿದೆ.

ಬೊಮ್ಮನಹಳ್ಳಿ ವಲಯದ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅಂಜನಾಪುರ ಉಪ–ವಿಭಾಗಗಳಲ್ಲಿ ಮಾರ್ಚ್‌ 8ರಂದು ಭೇಟಿ ನೀಡಿದಾಗ, ಸಿಬ್ಬಂದಿ ಯಾವುದೇ ಅಕ್ರಮ ನಡೆಸಿಲ್ಲ ಎಂದಿದ್ದರು. ಎಲ್ಲ ಖಾತೆಗಳನ್ನು ಪರಿಶೀಲಿಸಿದಾಗ 194ನೇ ವಾರ್ಡ್‌ನಲ್ಲಿ 357 ಹಾಗೂ 196 ವಾರ್ಡ್‌ನಲ್ಲಿ 341 ಅಕ್ರಮ ‘ಎ’ ಖಾತೆಗಳು ಪತ್ತೆಯಾದವು. ಹೀಗಾಗಿ, ಎಲ್ಲ ಎಆರ್‌ಒಗಳು ಅಕ್ರಮ ‘ಎ’ ಖಾತೆಗಳ ಮಾಹಿತಿಯನ್ನು ಒದಗಿಸಬೇಕು. ನಂತರದ ಪರಿಶೀಲನೆಯಲ್ಲಿ ಅಕ್ರಮ ಕಂಡುಬಂದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಪರಿಶೀಲನಾ ಸಮಿತಿ ಅಧ್ಯಕ್ಷರೂ ಆಗಿರುವ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ 14ರಂದು ಸುತ್ತೋಲೆ ಹೊರಡಿಸಿದ್ದಾರೆ.

ಪರಿಶೀಲನಾ ಸಮಿತಿ ಒಂದು ಉಪ ವಿಭಾಗದಲ್ಲಿ ತನಿಖೆ ನಡೆಸಿದಾಗ ಅಕ್ರಮ ‘ಎ’ ಖಾತೆಗಳನ್ನು ಪತ್ತೆಹಚ್ಚಿದೆ. ಇದೇ ರೀತಿ ಎಲ್ಲ ಉಪ ವಿಭಾಗಗಳಲ್ಲೂ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಮಾಹಹಿತಿಯನ್ನು 24ರ ಮಧ್ಯಾಹ್ನ 3 ಗಂಟೆಯೊಳಗೆ ನೀಡಬೇಕು. ‌ಇದಾದ ಬಳಿಕ ಪರಿಶೀಲನಾ ಸಮಿತಿ ತಪಾಸಣೆ ಮಾಡುತ್ತದೆ. ಆಗ ಯಾವುದಾದರೂ ಅಕ್ರಮ ಕಂಡು ಬಂದರೆ ಶಿಸ್ತು ಕ್ರಮದ ಜೊತೆಗೆ ಕ್ರಿಮಿನಲ್‌ ಮೊಕದ್ದಮೆಯನ್ನೂ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT