ಬೆಂಗಳೂರು: 'ಸರ್ಕಾರ ವಿಧಾನ ಮಂಡಲದಲ್ಲಿ ಅಂಗೀಕರಿಸಿರುವ ‘ಬಿಬಿಎಂಪಿ ಮಸೂದೆ 2020’ ಅನ್ನು ವಿಶ್ಲೇಷಣೆ ನಡೆಸಿರುವ ಜನಾಗ್ರಹ ಸಂಸ್ಥೆ ‘ಬೆಂಗಳೂರಿನ ಆಡಳಿತ ಪರಿವರ್ತನೆಯ ಮಹದವಕಾಶವೊಂದು ಕೈತಪ್ಪಿದೆ’ ಎಂದು ವ್ಯಾಖ್ಯಾನಿಸಿದೆ.

ಈ ಮಸೂದೆ ಇನ್ನಷ್ಟು ಮಹತ್ವಾಕಾಂಕ್ಷಿಯಾಗಿ ಹಾಗೂ ಸಮಗ್ರವಾಗಿ ರೂಪುಗೊಳ್ಳಬೇಕಾದ ಅಗತ್ಯವಿತ್ತು. ಜನರಿಗೆ ಈ ಬಗ್ಗೆ ಸಾಕಷ್ಟು ಮಾಹಿತಿ ನೀಡಿ, ಅವರಿಂದ ಸಲಹೆಗಳನ್ನು ಪಡೆದು ಇನ್ನಷ್ಟು ವ್ಯವಸ್ಥಿತವಾಗಿ ಈ ಮಸೂದೆಯನ್ನು ರೂಪಿಸಬೇಕಿತ್ತು ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಇಂತಹ ಅರೆಬೆಂದ ಕ್ರಮಗಳಿಂದ ನಗರದಲ್ಲಿ ಜನರ ಜೀವನ ಮಟ್ಟ ಸುಧಾರಣೆ ಅಸಾಧ್ಯ. ಇದು ಅರ್ಧದಷ್ಟು ತುಂಬಿರುವ ಲೋಟಕ್ಕಿಂತ ಅರ್ಧದಷ್ಟು ಖಾಲಿ ಇರುವ ಲೋಟ ಲೋಟದಂತಿದೆ. ಆದರೆ, ವಲಯ ಸಮಿತಿಗಳಿಗೆ, ವಾರ್ಡ್ ಸಮಿತಿಗಳಿಗೆ ಹಾಗೂ ಏರಿಯಾ ಸಭಾಗಳನ್ನು ರಚಿಸಿ, ಅವುಗಳಿಗೆ ಹೆಚ್ಚಿನ ಅಧಿಕಾರ ನೀಡಿರುವುದು ಒಳ್ಳೆಯ ಬೆಳವಣಿಗೆ. ಆಡಳಿತದಲ್ಲಿ ಜನರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎಂದು ಜನಾಗ್ರಹ ಹೇಳಿದೆ.

ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ ಸಮಗ್ರ ಸುಧಾರಣೆಯ ಅಗತ್ಯವಿತ್ತು. ಇದನ್ನು ಮನಗಂಡು ಸರ್ಕಾರ ತಪ್ಪಿ ಹೋಗಿರುವ ಕೆಲವು ಕೊಂಡಿಗಳನ್ನು ಮತ್ತೆ ಜೋಡಿಸಲು ಕ್ರಮಕೈಗೊಳ್ಳಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.

ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಕಾಂತ್ ವಿಶ್ವನಾಥನ್, ‘ಪಾಲಿಕೆಯ ವಲಯಗಳಿಗೆ, ವಾರ್ಡ್ಗಳಿಗೆ ಅಧಿಕಾರ ಹಾಗೂ ಹೊಣೆಗಾರಿಕೆ ಹೆಚ್ಚಿಸಿ ಕೆಲಸ ಕಾರ್ಯಗಳನ್ನು ಹಚ್ಚುವ ಮೂಲಕ ಆಡಳಿತ ವಿಕೇಂದ್ರೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಾರ್ಡ್ ಸಮಿತಿಗಳನ್ನು ಬಲಪಡಿಸಿ, ಏರಿಯಾ ಸಭಾಗಳನ್ನು ರಚಿಸಿ ನಾಗರಿಕರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಿದ್ದು ಆಶಾದಾಯಕ ಬೆಳವಣಿಗೆ. ಮಹಾನಗರದ ಯೋಜನೆ ರೂಪಿಸುವುದು, ಪ್ರದೇಶಗಳ ಅಭಿವೃದ್ಧಿ, ಹಣಕಾಸು ಮತ್ತು ಮಾನವ ಸಂಪನ್ಮೂಲ ಸಾಮರ್ಥ್ಯಗಳ ವರ್ಧನೆಗೆ ಹೆಚ್ಚಿನ ಕ್ರಮ ಕೈಗೊಳ್ಳುವ ಅಗತ್ಯವಿತ್ತು. ನಿಜಕ್ಕೂ ಬದಲಾವಣೆ ಕಾಣಬೇಕಿದ್ದರೆ ಆಡಳಿತದಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಬೇಕಿತ್ತು’ ಎಂದು ಅಭೀಪ್ರಾಯಪಟ್ಟರು.

ಸಂಸ್ಥೆಯ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಅಲವಿಲ್ಲಿ, ‘ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರದ ಆಡಳಿತ ಸುಧಾರಣೆಗೆ ಇನ್ನಷ್ಟು ಪ್ರಬಲ ಕಾಯ್ದೆಯ ಅಗತ್ಯವಿತ್ತು. ನಗರದ ಬಲು ಮುಖ್ಯ ಸಮಸ್ಯೆಗಳನ್ನು ಈ ಮಸೂದೆಯು ಬಗೆಹರಿಸಲಿದೆಯೇ ಎಂದು ನೋಡಿದರೆ ನಿರಾಶೆ ಕಾದಿದೆ. ಇದನ್ನು ಇನ್ನಷ್ಟು ಉತ್ತಮವಾಗಿ ರೂಪಿಸಲು ಅವಕಾಶ ಇತ್ತು.ವಿಧಾನ ಸಭಾಧ್ಯಕ್ಷರು ಮಸೂದೆಯನ್ನು ಜಂಟಿ ಪರಿಶೀಲನಾ ಸಮಿತಿಯಿಂದ ವಿಶ್ಲೇಷಣೆಗೆ ಒಳಪಡಿಸಿರುವುದೇನೂ ನಿಜ. ಆದರೂ ತಜ್ಞರು ಹಾಗೂ ನಾಗರಿಕರು ಈ ಮಸೂದೆಯ ಅಂಶಗಳನ್ನು ಪರಿಶೀಲಿಸುವುದಕ್ಕೆ ಅವಕಾಶ ನೀಡಬೇಕಿತ್ತು. ಇದಾವುದನ್ನೂ ಮಾಡದೆಯೇ ತರಾತುರಿಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರ ಇನ್ನಾದರೂ ಈ ಮಸೂದೆ ಬಗ್ಗೆ ಸಾರ್ವಜನಿಕ ಚರ್ಚೆ ನಡೆಸಿ ಕಲೋಪಗಳನ್ನು ಸರಿಪಡಿಸುವ ಮೂಲಕ ಮಹಾನಗರದಲ್ಲಿ ಮಾದರಿ ಆಡಳಿತ ವ್ಯವಸ್ಥೆ ರೂಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.