ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಆರೈಕೆ ಕೇಂದ್ರ: ಹಾಸಿಗೆ ಕಾಯ್ದಿರಿಸದೆಯೇ ನೇರ ದಾಖಲಾತಿಗೆ ಅವಕಾಶ

ದಾಖಲಾತಿ ಪ್ರಕ್ರಿಯೆ ಸರಳಗೊಳಿಸಿದ ಬಿಬಿಎಂಪಿ
Last Updated 12 ಮೇ 2021, 21:17 IST
ಅಕ್ಷರ ಗಾತ್ರ

ಬೆಂಗಳೂರು: ಕೊರೋನಾ ಸೋಂಕಿನ ಲಘು ಲಕ್ಷಣಗಳಿರುವವರು ಕೋವಿಡ್‌ ರೋಗಿಗಳ ಆರೈಕೆ ಕೇಂದ್ರಕ್ಕೆ ದಾಖಲಾಗುವ ಪ್ರಕ್ರಿಯೆಯನ್ನು ಬಿಬಿಎಂಪಿ ಸರಳಗೊಳಿಸಿದೆ. ಇನ್ನು ಹಾಸಿಗೆಯನ್ನು ಮುಂಚಿತವಾಗಿ ಕಾಯ್ದಿರಿಸದೆಯೇ ನೇರವಾಗಿ ಈ ಕೇಂದ್ರಗಳಿಗೆ ದಾಖಲಾಗಬಹುದು.

ಈ ಹಿಂದೆ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾಗುವುದಕ್ಕೂ ಸರ್ಕಾರಿ ಕೋಟಾ ಅಡಿ ಹಾಸಿಗೆ ಕಾಯ್ದಿರಿಸುವ ಕೇಂದ್ರೀಕೃತ ವ್ಯವಸ್ಥೆಯ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಹಾಸಿಗೆ ಕಾಯ್ದಿರಿಸಬೇಕಿತ್ತು.

ನೇರವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ಬರುವ ಕೊರೋನಾ ಸೊಂಕಿತರನ್ನು, ಅಲ್ಲಿನ ಚಿಕಿತ್ಸೆ ನಿರ್ಧಾರ ಕೇಂದ್ರದ ವೈದ್ಯರು ತಪಾಸಣೆಗೆ ಒಳಪಡಿಸಲಿದ್ದಾರೆ. ಅವರ ಆರೋಗ್ಯ ಸ್ಥಿತಿಯ ಆಧಾರದಲ್ಲಿ ಅವರಿಗೆ ಆರೈಕೆ ಕೇಂದ್ರದಲ್ಲೇ ಚಿಕಿತ್ಸೆ ನೀಡಬಹುದೋ ಅಥವಾ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಬೇಕೋ ಎಂಬ ಬಗ್ಗೆ ಶಿಫಾರಸು ಮಾಡಲಿದ್ದಾರೆ.

ಈ ಕೋವಿಡ್ ಆರೈಕೆ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ದೂರವಾಣಿ ಸಂಪರ್ಕವನ್ನೂ ಕಲ್ಪಿಸಲಾಗಿದ್ದು, ಕೇಂದ್ರದ ಸಿಬ್ಬಂದಿ ದಿನದ 24 ಗಂಟೆಯೂ ನಾಗರಿಕರ ಕರೆಗಳಿಗೆ ಉತ್ತರಿಸಲಿದ್ದಾರೆ.

ಕೋವಿಡ್‌ ಕೇಂದ್ರಕ್ಕೆ ದಾಖಲಾಗುವ ಕುರಿತ ಹೆಚ್ಚಿನ ಮಾಹಿತಿಗೆ ನಾಗರಿಕರು ಅಥವಾ ಕೊರೋನಾ ಸೋಂಕಿತರು ಬಿಬಿಎಂಪಿ ಕೇಂದ್ರ ಕಚೇರಿಯ ಕೋವಿಡ್ ಆರೈಕೆ ಕೇಂದ್ರ ಸಹಾಯವಾಣಿಗೂ (080-22493200 ಅಥವಾ 080-22493201) ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT