ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.57 ಲಕ್ಷ ಚದರ ಮೀಟರ್ ಗುಂಡಿ ಮುಚ್ಚಿದ ಪಾಲಿಕೆ

Last Updated 28 ಸೆಪ್ಟೆಂಬರ್ 2021, 17:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಒಂದು ತಿಂಗಳ ಅವಧಿಯಲ್ಲಿ 1.57 ಲಕ್ಷ ಚದರ ಮೀಟರ್‌ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಮುಖ್ಯ ರಸ್ತೆ, ಉಪಮುಖ್ಯ ರಸ್ತೆ ಮತ್ತು ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ನಿರಂತರವಾಗಿ ಮುಚ್ಚಲಾಗುತ್ತಿದೆ. ಗುಂಡಿ ಮುಚ್ಚಲು 490 ಲಾರಿ ಲೋಡ್ ಡಾಂಬರ್‌ ಬಳಸಲಾಗಿದೆ. ಅದಲ್ಲದೇ, 101 ಲೋಡ್ ವೆಟ್‌ ಮಿಕ್ಸ್(ಜಲ್ಲಿ ಮಿಶ್ರಿತ ಸಿಮೆಂಟ್‌) ಬಳಸಿ 10 ಸಾವಿರ ಚದರ ಮೀಟರ್‌ನಷ್ಟು ಗುಂಡಿಗಳನ್ನು ಮುಚ್ಚಲಾಗಿದೆ ಎಂದು ವಿವರಿಸಿದೆ.

ಎಂಟೂ ವಲಯಗಳ ಮುಖ್ಯ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ವಿವಿಧ ಡಾಂಬರೀಕಣ ಯೋಜನೆಗೆ ಗುತ್ತಿಗೆ ಪಡೆದ ಗುತ್ತಿಗೆದಾರರಿಂದಲೂ ಆಯಾ ವಲಯ ಮತ್ತು ವಿಭಾಗಗಳಲ್ಲಿ ಗುಂಡಿ ಮುಚ್ಚಲು ಸೂಚಿಸಲಾಗಿದೆ ಎಂದು ತಿಳಿಸಿದೆ.

ಬೆಸ್ಕಾಂ, ಕೆಪಿಟಿಸಿಎಲ್, ಜಲಮಂಡಳಿ ಹಾಗೂ ಒಎಫ್‌ಸಿ ಸಂಸ್ಥೆಗಳು ಮುಖ್ಯ ರಸ್ತೆಗಳನ್ನು ಅಗೆಯುತ್ತಿದ್ದು, ಮಳೆಗಾಲ ಇರುವುದರಿಂದ ಅತೀ ಅವಶ್ಯಕ ಕಾಮಗಾರಿ ಇದ್ದರೆ ಮಾತ್ರ ಪಾಲಿಕೆಗೆ ತಿಳಿಸಿ ಅಗೆಯಲು ತಿಳಿಸಲಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT