ಶುಕ್ರವಾರ, ಜೂನ್ 25, 2021
28 °C

ಇಂದಿರಾ ಕ್ಯಾಂಟೀನ್‌: ಆಹಾರ ವಿತರಣೆಗೆ ಹೊಸ ಆ್ಯಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ವಿತರಣೆ ವೇಳೆ ಯಾವುದೇ ದುರ್ಬಳಕೆ ನಡೆಯಬಾರದು, ಆಹಾರದ ಲೆಕ್ಕಾಚಾರದಲ್ಲಿ ಯಾವುದೇ ಅಕ್ರಮಗಳಿಗೆ ಆಸ್ಪದ ನೀಡದಂತೆ ಪಾರದರ್ಶಕ ವ್ಯವಸ್ಥೆ ತರುವ ಉದ್ದೇಶದಿಂದ ಬಿಬಿಎಂ‍ಪಿಯು ಹೊಸ ಆ್ಯಪ್ ಪರಿಚಯಿಸಿದೆ.

’ಬಿಬಿಎಂಪಿ ಐಸಿಪಿಡಿ‘ ಹೆಸರಿನ ಆ್ಯಪ್‌ ಬುಧವಾರದಿಂದಲೇ ಕಾರ್ಯಾರಂಭ ಮಾಡಿದ್ದು, ಇಂದಿರಾ ಕ್ಯಾಂಟೀನ್‌ ಆಹಾರದ ಪಾರ್ಸೆಲ್‌ ವಿತರಣೆಯ ಮಾಹಿತಿ ದಾಖಲಿಸಿಕೊಳ್ಳುತ್ತಿದೆ. ಇಂದಿರಾ ಕ್ಯಾಂಟೀನ್‌ನಲ್ಲಿರುವ ಸಿಬ್ಬಂದಿಯು ಆಹಾರ ಪಡೆಯುವ ಫಲಾನುಭವಿಗಳ ಫೋಟೊ, ದೂರವಾಣಿ ಸಂಖ್ಯೆ ಹಾಗೂ ಆಹಾರ ಪೊಟ್ಟಣಗಳ ಸಂಖ್ಯೆಯನ್ನು ಇದರಲ್ಲಿ ನಮೂದಿಸಬೇಕು. 

ಈ ಆ್ಯಪ್‌ನಲ್ಲಿ ಫೋಟೊ ಅಪ್‌ಲೋಡ್‌ ಮಾಡುವಾಗ ವಿಳಂಬವಾಗುತ್ತಿದೆ. ಇದರಿಂದ ಆಹಾರ ವಿತರಣೆಯೂ ತಡವಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. ಅಲ್ಲದೆ,  ಹೆಚ್ಚಿನ ಸಿಬ್ಬಂದಿಗೆ ಸ್ಮಾರ್ಟ್ ಫೋನ್ ಬಳಕೆ ತಿಳಿಯದೇ ಇರುವುದರಿಂದಲೂ ಕಷ್ಟವಾಗುತ್ತಿದೆ. ಇದೇ ಆ್ಯಪ್‌ನಲ್ಲಿ ಈಗ  ಆಹಾರ ವಿತರಣೆಯ ಮಾಹಿತಿ ಅಂಶವನ್ನೂ ಸೇರಿಸಿ ಹೊಸದಾಗಿ ರೂಪಿಸಲಾಗಿದೆ.

ಮನೆಗೆ ಮೂರಕ್ಕಿಂತ ಹೆಚ್ಚು ಊಟ ಅಗತ್ಯ ಇದ್ದವರು ರೇಷನ್ ಕಾರ್ಡ್ ಸಂಖ್ಯೆ ಕೊಟ್ಟು, ಆ್ಯಪ್‌ನಲ್ಲಿ ನಮೂದಿಸಿ ಒಟಿಪಿ ಸಂಖ್ಯೆಯನ್ನು ಹೇಳಿ ಆಹಾರ ಪೊಟ್ಟಣ ಪಡೆಯಬಹುದಾಗಿದೆ.

ಲಾಕ್‌ಡೌನ್‌ ಆರಂಭವಾದ ಬಳಿಕ ಇಂದಿರಾ ಕ್ಯಾಂಟೀನ್ ನಲ್ಲಿ ಮೂರು ಹೊತ್ತೂ ಉಚಿತ ಊಟ, ಉಪಾಹಾರವನ್ನು ನೀಡಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು