ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28 ವಿಧಾನಸಭೆ ಕ್ಷೇತ್ರಗಳಲ್ಲಿ ಕೆಂಪೇಗೌಡ ದಿನಾಚರಣೆ

Published 22 ಜೂನ್ 2023, 16:02 IST
Last Updated 22 ಜೂನ್ 2023, 16:02 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 28 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೂನ್‌ 28ರಿಂದ ನಾಡಪ್ರಭು ಕೆಂಪೇಗೌಡ ದಿನ ಆಚರಿಸಲಾಗುತ್ತದೆ. ಜುಲೈ 9ರಂದು ಸಮಾರೋಪ ಸಮಾರಂಭ ವಿಧಾನಸೌಧದ ಮುಂಭಾಗ ನಡೆಯಲಿದೆ.

ವಿಧಾನಸಭೆ ಕ್ಷೇತ್ರಗಳಲ್ಲಿ ಅಲ್ಲಿನ ಅನುಕೂಲಕ್ಕೆ ತಕ್ಕಂತೆ ಜೂನ್‌ 28ರಿಂದ ಜುಲೈ 8ರವರೆಗೆ ಯಾವುದಾದರೂ ಒಂದು ದಿನ ಆಚರಣೆ ಮಾಡಬಹುದು. ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ವಲಯಗಳ ಆಯುಕ್ತರು ಹಾಗೂ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಸೂಚನೆ ನೀಡಿದ್ದಾರೆ.

ಆಯಾ ವಲಯ ಆಯುಕ್ತರು ಹಾಗೂ ವಲಯ ಜಂಟಿ ಆಯುಕ್ತರು ವಿಧಾನಸಭಾ ಕ್ಷೇತ್ರದ ಶಾಸಕರ ಸಮಯ ಪಡೆದು ಅದರಂತೆ ಕೆಂಪೇಗೌಡ ದಿನ ಆಚರಿಸುವ ದಿನ ಹಾಗೂ ಸಮಯ ನಿಗದಿಪಡಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಹೇಳಿದರು.

ವಿಧಾನಸೌಧ ಆವರಣದಲ್ಲಿ ಜೂನ್‌ 27ರಂದು ರಾಜ್ಯಮಟ್ಟದ ದಿನ ಆಚರಿಸಲಾಗುತ್ತಿದ್ದು, ಕೆಂಪೇಗೌಡರ 4 ಗೋಪುರ ಹಾಗೂ ಮಾಗಡಿಯಲ್ಲಿರುವ ನಾಡಪ್ರಭು ಕೆಂಪೇಗೌಡರ ಸಮಾಧಿ ಬಳಿಯಿಂದ ದಿವ್ಯ ಜ್ಯೋತಿಯ ಮೂಲಕ ಬೆಳಿಗ್ಗೆ 9ಕ್ಕೆ ಮೆರವಣಿಗೆ ಆರಂಭವಾಗಲಿದೆ. ಗೋಪುರಗಳಿಂದ ಹೊರಡುವ ಮೆರವಣಿಗೆಗೆ ಬೆಂಗಳೂರು ನಗರ ಪ್ರತಿನಿಧಿಸುವ ಸಚಿವರು ಚಾಲನೆ ನೀಡಲಿದ್ದು, ಶಾಸಕರ ಸಮ್ಮುಖದಲ್ಲಿ ಗೋಪುರಗಳಿಂದ ವಿಧಾನಸೌದಧ ಆವರಣಕ್ಕೆ ದಿವ್ಯ ಜ್ಯೋತಿಯನ್ನು ಮೆರವಣಿಗೆಯ ಮೂಲಕ ತರಬೇಕು. ಅದಕ್ಕೆ ಬೇಕಾದಂತಹ ಸಿದ್ದತೆಗಳನ್ನು ಮಾಡಿಕೊಳ್ಳಲು ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಆರ್.ಆರ್. ನಗರ ವಲಯದ ಆಯುಕ್ತರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT