ಶನಿವಾರ, ಮೇ 15, 2021
25 °C

ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಅಧಿಕಾರಿಗಳ ತಂಡ ಧಿಡೀರ್ ಭೇಟಿ: ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ಕೊರೊನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆ ಗಳಲ್ಲಿ ಹಾಸಿಗೆ ಸಿಗುತ್ತಿಲ್ಲ ಎಂಬ ದೂರಿನ ಕಾರಣ ಬಿಬಿಎಂಪಿ ಅಧಿಕಾರಿಗಳ ತಂಡವು ಖಾಸಗಿ ಆಸ್ಪತ್ರೆಗಳಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್, ಅಪೋಲೋ, ಚಂದಾಪುರದ ಬಳಿ ನಾರಾಯಣ ಹೃದಯಾಲಯ ಹಾಗೂ ಆಕ್ಸ್ ಫರ್ಡ್ ಆಸ್ಪತ್ರೆಗಳಲ್ಲಿ ಶೇಕಡ 50ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆಯೇ? ಎಂಬುದನ್ನು ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿದರು. ಆದರೆ, ಯಾವ ಆಸ್ಪತ್ರೆಯಲ್ಲೂ ಸರ್ಕಾರ ನಿಗದಿಪಡಿಸಿದ ಹಾಸಿಗೆಗಳನ್ನು ಮೀಸಲಿಡದಿರುವುದು ಕಂಡು ಬಂತು.

ಈ ಕುರಿತು ಪ್ರತಿಕ್ರಿಯಿಸಿದ ವಲಯ ಆಯುಕ್ತ ರಾಜೇಂದ್ರ ಚೋಳನ್, ‘ಖಾಸಗಿ ಆಸ್ಪತ್ರೆಯವರು ಸದ್ಯ ಶೇಕಡ 20 ರಿಂದ 30 ರಷ್ಟು ಹಾಸಿಗೆಗಳನ್ನು ನೀಡಿದ್ದಾರೆ. ಸರ್ಕಾರಿ ಆದೇಶ ಪಾಲಿಸದ ಆಸ್ಪತ್ರೆಗಳಿಗೆ ನೋಟೀಸ್ ನೀಡಿದ್ದೇವೆ. ಮುಂದುವರಿದು ಕೆಪಿಎಂಇ ಕಾಯ್ದೆ ಅನ್ವಯ ಕ್ರಮಕೈಗೊಳ್ಳಲಾಗುವುದು. ಖಾಸಗಿ ಆಸ್ಪತ್ರೆಗಳಿಂದ ಶೇಕಡ 50ರಷ್ಟು ಹಾಸಿಗೆಗಳು ಲಭ್ಯವಾದಲ್ಲಿ ಈಗಿರುವ ಕೊರತೆ ನೀಗಲಿದೆ’ ಎಂದರು.

’ಹಾಸಿಗೆ ಇಲ್ಲ ಎಂದು ರೋಗಿಗಳನ್ನು ವಿನಾಕಾರಣ ಕಾಯಿಸುವುದು, ಹೊರ ಕಳುಹಿಸುವುದು, ಒಳರೋಗಿಯಾಗಿ ದಾಖಲಿಸದೇ ಇರುವುದು ಇತ್ಯಾದಿ ದೂರುಗಳು ಬಂದಿವೆ. ಹೀಗಾಗಿ, ಪ್ರತಿ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ‘ಸಹಾಯ ಕೇಂದ್ರ’ ಸ್ಥಾಪಿಸಲಾಗುವುದು. ಒಬ್ಬ ವೈದ್ಯ, ನೋಡಲ್ ಅಧಿಕಾರಿ ಹಾಗು ಸಿಬ್ಬಂದಿ ಇರಲಿದ್ದು, ಬಂದ ರೋಗಿಗಳಿಗೆ ಯಾವುದೇ ಅನಾನುಕೂಲ ಆಗದಂತೆ ನಿಗಾವಹಿಸಲಿದ್ದಾರೆ’ ಎಂದರು.

ಐಎಎಸ್ ಅಧಿಕಾರಿ ಯಶವಂತ್, ಜಂಟಿ ಆಯುಕ್ತ ಎಂ.ರಾಮಕೃಷ್ಣ, ಆರೋಗ್ಯಾಧಿಕಾರಿ ಡಾ.ಸವಿತಾ, ಡಾ.ಸುರೇಶ್ ಹಾಗೂ ಆರೋಗ್ಯ ವೈದ್ಯಾಧಿಕಾರಿ ನಾಗೇಂದ್ರ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು