ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಬೆಸೆಯಲಿದೆ ಮಹಾನಗರ ಪಾಲಿಕೆ

ವೆಬ್‌ಸೈಟ್‌ನಲ್ಲಿ ರಸ್ತೆ ಇತಿಹಾಸದ ಜೊತೆ ಇತರ ವಿವರಗಳೂ ಲಭ್ಯ
Last Updated 30 ಅಕ್ಟೋಬರ್ 2019, 4:52 IST
ಅಕ್ಷರ ಗಾತ್ರ

ಬೆಂಗಳೂರು: ಕಸ ಸಂಗ್ರಹ ಮತ್ತು ವಿಲೇವಾರಿ ವಿವರ, ರಸ್ತೆ ಅಗೆಯಲು ಅನುಮತಿ ನೀಡಿದ ವಿವರ, ಮರ ಕಡಿಯಲು ಅನುಮತಿ ನೀಡಿದ ವಿವರಗಳನ್ನು ಪಡೆಯಬೇಕೇ. ಹಾಗಿದ್ದರೆ, ಇನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ (bbmp.gov.in) ರಸ್ತೆ ಇತಿಹಾಸದ ಬಗ್ಗೆ ವಿವರ ನೀಡುವ ಕೊಂಡಿಯನ್ನು ಕ್ಲಿಕ್ಕಿಸಿದರೆ ಸಾಕು.

ಜನೋಪಯೋಗಿ ಮಾಹಿತಿಗಳನ್ನು ರಸ್ತೆ ಇತಿಹಾಸದ ವಿವರ ನೀಡುವ ಕೊಂಡಿಯ ಜೊತೆ ಸೇರಿಸುವಂತೆ ಪಾಲಿಕೆಗೆ ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ.

ಕಸ ನಿರ್ವಹಣೆಗೆ ಸಂಬಂಧಿಸಿದಂತೆ ವಾರ್ಡ್‌ವಾರು ಕಸ ಸಂಗ್ರಹ ತಾಣ, ಕಸ ಸಂಸ್ಕರಣಾ ಘಟಕಗಳು, ಭೂಭರ್ತಿ ಕೇಂದ್ರಗಳು, ನಿತ್ಯ ಸಂಗ್ರಹಿಸುವ ಕಸ ಹಾಗೂ ಅವುಗಳನ್ನು ಕಸ ಸಂಸ್ಕರಣಾ ಘಟಕ ಅಥವಾ ಭೂಭರ್ತಿ ಕೇಂದ್ರಗಳಿಗೆ ಸಾಗಿಸುವ ವಿವರಗಳನ್ನೂ ಜಿಐಎಸ್‌ ಆಧರಿತ ರಸ್ತೆ ಇತಿಹಾಸದ ವಿವರದ ಜೊತೆ ಪಾಲಿಕೆ ಜೋಡಿಸಲಿದೆ.

ಕಟ್ಟಡ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ ಮತ್ತು ಸ್ವಾಧೀನ ಪ್ರಮಾಣಪತ್ರ ನೀಡಿದ ಹಿಂಬರಹದ ಪರವಾನಗಿಯನ್ನು ಕಟ್ಟಡ ನಿರ್ಮಾಣವಾಗುತ್ತಿರುವ ಸಮೀಪದ ರಸ್ತೆಯ ಗುರುತುಸಂಖ್ಯೆ ಜೊತೆ ವೆಬ್‌ಸೈಟ್‌ನಲ್ಲಿ ರಸ್ತೆ ಇತಿಹಾಸದ ಜೊತೆ ಜೋಡಿಸಬೇಕು ಎಂದು ಪಾಲಿಕೆಗೆ ಸೂಚನೆ ನೀಡಲಾಗಿದೆ.

ಮೂರು ತಿಂಗಳು ಕಾಲಾವಕಾಶ: ಈ ಎಲ್ಲ ವ್ಯವಸ್ಥೆಗಳನ್ನು ರಸ್ತೆ ಇತಿಹಾಸ ತಂತ್ರಾಂಶದಲ್ಲಿ ಅಳವಡಿಸಿ ಪಾಲಿಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಕ್ಕೆ ಬಿಬಿಎಂಪಿಗೆ 3 ತಿಂಗಳು ಕಾಲಾವಕಾಶ ನೀಡಿದೆ. ಆಯುಕ್ತರು 2020ರ ಜನವರಿ 15ರ ಒಳಗೆ ಇವೆಲ್ಲ ಅಂಶಗಳನ್ನು ಜಾರಿಗೊಳಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ಮುಖ್ಯಾಂಶಗಳು

*ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವತ್ತುಗಳ ವಿವರವನ್ನು ಅವುಗಳ ಸ್ವತ್ತು ಗುರುತು ಸಂಖ್ಯೆ (ಪಿಐಡಿ) ಜೊತೆಗೆ ರಸ್ತೆ ಇತಿಹಾಸದಲ್ಲಿ ನಮೂದಿಸಬೇಕು.

*ರಸ್ತೆಗಳ ವ್ಯಾಪ್ತಿಯಲ್ಲಿ ಮರಗಳನ್ನು ಕತ್ತರಿಸಲು ನೀಡಿದ ಪರವಾನಗಿ, ಅದರಿಂದ ಬಂದ ಆದಾಯ ಹಾಗೂ ವೆಚ್ಚದ ವಿವರಗಳನ್ನು ನೀಡುವುದು

*ಬೀದಿದೀಪಗಳ ವಿವರವನ್ನು ಸೇರಿಸಬೇಕು.

ಪ್ರಸ್ತುತ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ಅಳವಡಿಕೆಗೆ ರಸ್ತೆ
ಅಗೆದ ಜಿಐಎಸ್‌ ಮಾಹಿತಿ ಮಾತ್ರ ವೆಬ್‌ಸೈಟ್‌ನಲ್ಲಿದೆ. ಅದರ ಜೊತೆಗೆ ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್‌, ಗೇಲ್‌, ಬಿಎಂಆರ್‌ಸಿಎಲ್‌, ಬಿಎಸ್‌ಎನ್‌ಎಲ್‌ ಮತ್ತು ಖಾಸಗಿ ದೂರಸಂಪರ್ಕ ಸೇವಾ ಸಂಸ್ಥೆಗಳು ಇತರ ಕಾಮಗಾರಿಗಳಿಗಾಗಿ ರಸ್ತೆ ಅಗೆದ ಜಿಐಎಸ್‌ ಮಾಹಿತಿಯೂ
ರಸ್ತೆ ಇತಿಹಾಸದ ಜೊತೆಗೆ ಸೇರಿಸಬೇಕು ಎಂದು ಪಾಲಿಕೆಗೆ ಸೂಚನೆ ನೀಡಲಾಗಿದೆ.

ರಸ್ತೆಗೆ ಸಂಬಂಧಿಸಿದ ಚರಂಡಿ, ವಿಭಜಕ, ಪಾದಚಾರಿ ಮಾರ್ಗ, ಮೇಲ್ಸೇತುವೆ, ಕೆಳಸೇತುವೆ, ಗ್ರೇಡ್‌ ಸಪರೇಟರ್‌, ರೈಲಿಂಗ್ಸ್‌, ಟ್ರಾಫಿಕ್‌ ವಿನ್ಯಾಸದ ವಿವರಗಳನ್ನು ಈ ತಂತ್ರಾಂಶದಲ್ಲಿ ಸೇರಿಸಲಿದೆ.

ಇತರ ಮಾಹಿತಿ

l ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವತ್ತುಗಳ ವಿವರವನ್ನು ಅವುಗಳ ಸ್ವತ್ತು ಗುರುತು ಸಂಖ್ಯೆ (ಪಿಐಡಿ) ಜೊತೆಗೆ ರಸ್ತೆ ಇತಿಹಾಸದಲ್ಲಿ ನಮೂದಿಸಬೇಕು.

l ರಸ್ತೆಗಳ ವ್ಯಾಪ್ತಿಯಲ್ಲಿ ಮರಗಳನ್ನು ಕತ್ತರಿಸಲು ನೀಡಿದ ಪರವಾನಗಿ, ಅದರಿಂದ ಬಂದ ಆದಾಯ ಹಾಗೂ ವೆಚ್ಚದ ವಿವರಗಳನ್ನು ನೀಡುವುದು

l ಬೀದಿದೀಪಗಳ ವಿವರವನ್ನು ಸೇರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT