ಗುರುವಾರ , ಅಕ್ಟೋಬರ್ 1, 2020
28 °C
ಮೇಯರ್‌ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧಾರ

45 ವಾರ್ಡ್‌ಗಳ ಕಸ ನಿರ್ವಹಣೆ ಗುತ್ತಿಗೆ ಕಾರ್ಯಾದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಸ ನಿರ್ವಹಣೆ–ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಬಿಎಂಪಿಯ 45 ವಾರ್ಡ್‌ಗಳ ಕಸ ನಿರ್ವಹಣೆ ಟೆಂಡರ್‌ನಲ್ಲಿ ಅರ್ಹತೆ ಗಳಿಸಿ, ಒಪ್ಪಿಗೆ ಪತ್ರವನ್ನು ಪಡೆದುಕೊಂಡಿರುವ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಬಿಬಿಎಂಪಿ ನಿರ್ಧರಿಸಿದೆ.

ಬಿಬಿಎಂಪಿ ಕಸ ವಿಲೇವಾರಿ ಟೆಂಡರ್‌ ಪ್ರಕ್ರಿಯೆ 2019ರ ಮೇನಲ್ಲೇ ಪೂರ್ಣಗೊಂಡಿದೆ. 45 ವಾರ್ಡ್‌ಗಳಲ್ಲಿ ಕಸ ವಿಲೇವಾರಿಗೆ ಅರ್ಹತೆ ಪಡೆದ ಗುತ್ತಿಗೆದಾರರಿಗೆ ಪಾಲಿಕೆ ಇನ್ನೂ ಕಾರ್ಯಾದೇಶ ನೀಡಿರಲಿಲ್ಲ.

ಒಪ್ಪಿಗೆ ಪತ್ರ ನೀಡಿರುವ ಗುತ್ತಿಗೆದಾರರಿಗೆ 2 ವಾರದೊಳಗೆ ಕಾರ್ಯಾದೇಶ ನೀಡುವಂತೆ ಹೈಕೋರ್ಟ್ 2020ರ ಫೆಬ್ರುವರಿಯಲ್ಲೇ ಸೂಚಿಸಿತ್ತು. ಈ ಕುರಿತ ಅರ್ಜಿ ವಿಚಾರಣೆ ಇದೇ 12ರಂದು ಬರಲಿರುವ ಹಿನ್ನೆಲೆಯಲ್ಲಿ ಕಾರ್ಯಾದೇಶ ನೀಡಲು ಮೇಯರ್ ಎಂ.ಗೌತಮ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು. 

ಪೂರ್ವ ವಲಯದ 30 ವಾರ್ಡ್‌ಗಳ ಕಸ ಸಂಗ್ರಹಣೆ ಮತ್ತು ಸಾಗಣೆ ಕುರಿತು ಹೈಕೋರ್ಟ್‌ನಲ್ಲಿ ಎಂಎಸ್‌ಜಿಪಿ ಸಂಸ್ಥೆ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದೆ. ಈ 30 ವಾರ್ಡ್‌ಗಳು ಮತ್ತು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾರ್ಯಾದೇಶ ನೀಡುವುದು ಬಾಕಿ ಇರುವ ಇನ್ನುಳಿದ 105 ವಾರ್ಡ್‌ಗಳ ಟೆಂಡರ್ ಪ್ರಸ್ತಾವನೆಯನ್ನು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು