ಗುರುವಾರ , ಮಾರ್ಚ್ 23, 2023
28 °C

ಬಿಡಿಎ: 402 ಮೂಲೆನಿವೇಶನಗಳ ಇ-ಹರಾಜು 9ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ವಿವಿಧ ಬಡಾವಣೆಗಳ ವಿವಿಧ ವಿಸ್ತೀರ್ಣಗಳ ಮೂಲೆ ನಿವೇಶನಗಳ ಮೂರನೇ ಹಂತದ ಇ-ಹರಾಜು ಪ್ರಕ್ರಿಯೆಯನ್ನು ಇದೇ 9ರಿಂದ ಅ.3ರವರೆಗೆ ನಡೆಸಲಿದೆ.

ಅರ್ಕಾವತಿ, ಎಚ್.ಎಸ್.ಆರ್, ಜೆ.ಪಿ. ನಗರ, ಬನಶಂಕರಿ, ಜ್ಞಾನಭಾರತಿ ಮತ್ತು  ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಗಳ ಒಟ್ಟು 402 ನಿವೇಶನಗಳನ್ನು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ ಮೂಲಕ ಹರಾಜು ಹಾಕಲಿದೆ. ಆರು ಹಂತಗಳಲ್ಲಿ ಇ-ಹರಾಜು ಪ್ರಕ್ರಿಯೆ ನಡೆಯಲಿದ್ದು, ಪ್ರತಿ ಹಂತದಲ್ಲಿ 70 ನಿವೇಶನಗಳನ್ನು ಹರಾಜಿಗೆ ಇಡಲಾಗುತ್ತದೆ. 

ಹರಾಜಿಗಿರುವ ಎಲ್ಲಾ ನಿವೇಶನಗಳ ಜಿಯೊ ಮ್ಯಾಪಿಂಗ್ ನಕ್ಷೆಗಳನ್ನು ಬಿಡಿಎ ವೆಬ್‌ಸೈಟ್‌ನಲ್ಲಿ (bdabengaluru.org) ಪ್ರಕಟಿಸಲಾಗಿದೆ. 

ಇ-ಹರಾಜು ವಿವರ

ಹಂತ; ನಿವೇಶನಗಳ ಕ್ರಮ ಸಂಖ್ಯೆ; ಪ್ರಾರಂಭದ ದಿನಾಂಕ; ಮುಕ್ತಾಯದ ದಿನಾಂಕ 

ಮೊದಲ ಹಂತ; 1 ರಿಂದ 70; ಸೆ.09; ಸೆ.25

2ನೇ ಹಂತ; 71 ರಿಂದ 140; ಸೆ.10; ಸೆ. 28

3ನೇ ಹಂತ; 141 ರಿಂದ 210; ಸೆ.11; ಸೆ.29

4ನೇ ಹಂತ; 211 ರಿಂದ 280; ಸೆ.12; ಸೆ.30

5ನೇ ಹಂತ; 281 ರಿಂದ 350; ಸೆ.14; ಅ.1

6ನೇ ಹಂತ; 351 ರಿಂದ 402; ಸೆ.15; ಅ.3

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು