ಬೆಂಗಳೂರು: ‘ಮುಖ್ಯಮಂತ್ರಿಯವರ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಯಡಿ ಎರಡು ಕೊಠಡಿ ಮತ್ತು ಅಡುಗೆಮನೆಗಳಿರುವ (ಬಿಎಚ್ಕೆ) ಫ್ಲ್ಯಾಟ್ ದರವನ್ನು ₹ 1 ಲಕ್ಷ ಕಡಿಮೆ ಮಾಡಿ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, 1 ಬಿಎಚ್ಕೆ ಮನೆಗೆ ಈಗಾಗಲೇ ಸಹಾಯಧನ ನೀಡಲಾಗಿದೆ ಎಂದರು.

ಒಟ್ಟು 46,499 ಬಹುಮಹಡಿ ಮನೆಗಳಲ್ಲಿ 8,096 ಫ್ಲ್ಯಾಟ್ಗಳ ಬೆಲೆ ಯನ್ನು ₹15 ಲಕ್ಷಗಳಿಂದ ₹14 ಲಕ್ಷಕ್ಕೆ ಇಳಿಸಲು ಪರಿಷ್ಕರಿಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕರಿಂದ ಆನ್–ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಮೊದಲು ಬಂದವರಿಗೆ ಆದ್ಯತೆ ಆಧಾರದಲ್ಲಿ ಮಾರಾಟ ಮಾಡಲು ಒಪ್ಪಿಗೆ ನೀಡಲಾಯಿತು.

ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ 1 ಬಿಎಚ್ಕೆ ಮತ್ತು 2 ಬಿಎಚ್ಕೆ ಫ್ಲ್ಯಾಟ್ ಗಳನ್ನು ಪೂರ್ಣಗೊಳಿಸಲು ವಾಣಿಜ್ಯ ಬ್ಯಾಂಕ್/ಹುಡ್ಕೊ ಸಂಸ್ಥೆಯಿಂದ ಆರ್ಜಿಎಚ್ಸಿಎಲ್ ಸಂಸ್ಥೆಯ ₹250 ಕೋಟಿ ಸಾಲ ಪಡೆಯಲು ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಎಎಚ್ಪಿ ಘಟಕದಡಿ ಅನುಷ್ಠಾನಗೊಳಿಸುತ್ತಿರುವ ವಸತಿ ಯೋಜನೆಗಳಿಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ₹100 ಕೋಟಿ ಸಾಲ ಪಡೆಯಲು ಸರ್ಕಾರಿ ಖಾತರಿ ನೀಡಲು ಅನುಮತಿ ನೀಡಲಾಯಿತು ಎಂದು ಮಾಧುಸ್ವಾಮಿ ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆ ದಕ್ಷಿಣ ತಾಲ್ಲೂಕು ಹೊಸಕೆರೆಹಳ್ಳಿ ಸಮೀಪ ಬೆಂಗಳೂರು ಸೌತ್ ಸೆಂಟರ್ಗೆ 5 ಗುಂಟೆ ಜಮೀನು ಮಂಜೂರು ಮಾಡಲು ತೀರ್ಮಾನಿಸಲಾಗಿದ್ದು, ಬಡ ವಿದ್ಯಾರ್ಥಿ ಗಳಿಗೆ ಹಾಸ್ಟೆಲ್ ಕಟ್ಟಡ ನಿರ್ಮಾಣ, ಶೈಕ್ಷಣಿಕ ಉನ್ನತೀಕರಣ, ಐಎಎಸ್, ಐಪಿಎಸ್ ಚಟುವಟಿಕೆಗಳನ್ನು ಸಂಸ್ಥೆ ನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.