ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಅತಿ ವೇಗದ ಬೈಕ್ ಚಾಲನೆ: ಮಾರಾಮಾರಿ

Published 1 ಮೇ 2024, 16:08 IST
Last Updated 1 ಮೇ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ದಾಪುರ ಠಾಣೆ ವ್ಯಾಪ್ತಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ಸಂಬಂಧ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಗುಟ್ಟೇಪಾಳ್ಯದಲ್ಲಿ ಏಪ್ರಿಲ್ 28ರಂದು ರಾತ್ರಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಸಂಬಂಧ ಎರಡೂ ಕಡೆಯವರು ದೂರು ನೀಡಿದ್ದು, ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಒಂದು ಗುಂಪಿನ ಬಾಬು, ಪ್ರವೀಣ್, ಅರುಣ್, ಅಜಿತ್, ಭರತ್ ಹಾಗೂ ಎದುರಾಳಿ ಗುಂಪಿನ ವಾಸೀಂ, ವಾಹೀದ್, ಇಲಿಯಾಸ್, ನಹೀಂ, ಅರ್ಬಾಜ್, ಅಬ್ರಾರ್ ಸೇರಿ 12 ಮಂದಿಯನ್ನು ಬಂಧಿಸಲಾಗಿದೆ. ಮತ್ತಷ್ಟು ಮಂದಿ ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ಚಾಕು-ದೊಣ್ಣೆ ಹಿಡಿದು ಹೊಡೆದಾಟ: ‘ಒಂದು ಗುಂಪಿನ ದೂರುದಾರರ ಸಂಬಂಧಿಕರೊಬ್ಬರು ಮೃತಪಟ್ಟಿದ್ದರು. ‌ಮನೆಯ ಮುಂದೆ ಶಾಮಿಯಾನ ಹಾಕಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಇದೇ ಸ್ಥಳಕ್ಕೆ ಬಂದಿದ್ದ ಎದುರಾಳಿ ತಂಡದ ಯುವಕ, ಕಿರಿದಾದ ರಸ್ತೆಯಲ್ಲಿ ಅತಿ ವೇಗವಾಗಿ ಬೈಕ್ ಚಲಾಯಿಸಿದ್ದರು. ದೂರುದಾರ ಹಾಗೂ ಇತರರು ಅವರನ್ನು ಪ್ರಶ್ನಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಬೈಕ್ ಚಲಾಯಿಸಿದ್ದ ಯುವಕನ ತಂದೆಗೂ ದೂರುದಾರರು ವಿಷಯ ತಿಳಿಸಿದ್ದರು. ಯುವಕನ ಬಳಿಯ ಕೀ ಕಸಿದುಕೊಂಡಿದ್ದ ತಂದೆ, ತಾಕೀತು ಮಾಡಿದ್ದರು. ಇದಾದ ನಂತರ ಯುವಕ ಹಾಗೂ ಆತನ ಕಡೆಯವರು, ಏಪ್ರಿಲ್ 28ರಂದು ರಾತ್ರಿ ಚಾಕು, ದೊಣ್ಣೆ ಹಿಡಿದು ದೂರುದಾರ ಹಾಗೂ ಇತರರ ಮೇಲೆ ಹಲ್ಲೆ ಮಾಡಿದ್ದರು. ಇದರಿಂದಾಗಿ, ಎರಡು ಗುಂಪಿನವರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಸೇರಿದ್ದರು. ಪರಸ್ಪರ ಮಾರಾಮಾರಿ ನಡೆದಿತ್ತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT