ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಎನ್ನಲಾಗಿದೆ.

ತೇಜಸ್ವಿ ಅವರು ಮಾರ್ಚ್ನಲ್ಲಿ ಚೆನ್ನೈ ಮೂಲದ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ವರಿಸಲಿದ್ದಾರೆ ಎಂದು ಲೈವ್ ಮಿಂಟ್ ವೆಬ್ಸೈಟ್ ವರದಿ ಮಾಡಿದೆ. ಆದರೆ, ಈ ಮಾಹಿತಿಯನ್ನು ತೇಜಸ್ವಿ ಸೂರ್ಯ ಅವರು ಖಚಿತಪಡಿಸಿಲ್ಲ.

ಮದುವೆ ಬಗ್ಗೆ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಶಿಲ್ಪಾ ಸಿ.ಎನ್ ಎನ್ನುವರು ಎಕ್ಸ್ನಲ್ಲಿ ಶಿವಶ್ರೀ ಅವರನ್ನು ಟ್ಯಾಗ್ ಮಾಡಿ, ‘ಶಿವಶ್ರೀ–ತೇಜಸ್ವಿ ವಿವಾಹವಾಗಲಿದ್ದಾರೆ’ ಎಂದು ಪೋಸ್ಟ್ ಮಾಡಿದ್ದಾರೆ.

ಶಿವಶ್ರೀ ಯಾರು?

29 ವರ್ಷದ ಶಿವಶ್ರೀ ಸ್ಕಂದಪ್ರಸಾದ್ ಅವರು ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ. ಭರತನಾಟ್ಯ ಹಾಗೂ ಸಂಸ್ಕೃತದಲ್ಲಿ ಚೆನ್ನೈ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕಲೆ, ಸಂಗೀತ ಹಾಗೂ ನೃತ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಶಿವಶ್ರೀ ಯೂಟ್ಯೂಬ್ನಲ್ಲಿ 2 ಲಕ್ಷಕ್ಕೂ ಅಧಿಕ, ಇನ್ಸ್ಟಾಗ್ರಾಂನಲ್ಲಿ 1.22 ಲಕ್ಷ ಫಾಲೋವರ್ಗಳನ್ನು ಹೊಂದಿದ್ದಾರೆ.

ಕಳೆದ ವರ್ಷ ರಾಮನವಮಿ ಪ್ರಯುಕ್ತ ಶಿವಶ್ರೀ ಅವರು ಕನ್ನಡದ ಪ್ರಸಿದ್ಧ ‘ಪೂಜಿಸಲೆಂದೇ ಹೂಗಳ ತಂದೆ‘ ಹಾಡನ್ನು ಹಾಡಿದ್ದರು. ಈ ಹಾಡಿಗೆ ಪ್ರಧಾನಿ ಮೋದಿ ಅವರು ಮೆಚ್ಚುಗೆ ಸೂಚಿಸಿದ್ದರು.

ಕಾನೂನು ಪದವೀಧರರಾಗಿರುವ 34 ವರ್ಷದ ಯುವ ಸಂಸದ ತೇಜಸ್ವಿ ಸೂರ್ಯ ಅವರು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷರೂ ಹೌದು. ಫಿಟ್ನೆಸ್ ಹಾಗೂ ವಾಕ್ಚಾತುರ್ಯದಿಂದ ರಾಜಕೀಯದಲ್ಲಿ ಗಮನ ಸೆಳೆದಿದ್ದಾರೆ.

ಆರ್ಎಸ್ಎಸ್, ಎಬಿವಿಪಿಯಲ್ಲಿ ಕೆಲಸ ಮಾಡಿದ ಹಿನ್ನೆಲೆ ಅವರಿಗಿದೆ.
.ವಕ್ಫ್ ಆಟಾಟೋಪ ತಡೆಗೆ ಕಾಯ್ದೆಗೆ ತಿದ್ದುಪಡಿ: ತೇಜಸ್ವಿ ಸೂರ್ಯ.ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣ ರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.