ಚಿತ್ರಸಂತೆಯಲ್ಲಿ ಮಕ್ಕಳು ಚಿತ್ರಗಳನ್ನು ಬಿಡಿಸುವ ಮೂಲಕ ಸಂಭ್ರಮಿಸಿದರು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಮುಖದ ಮೇಲೆ ಚಿತ್ತಾರ ಮೂಡಿಸಿಕೊಂಡಿದ್ದ ಯುವತಿಯೊಬ್ಬರು ನೆರೆದಿದ್ದವರ ಗಮನ ಸೆಳೆದರು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಕಲಾಸಕ್ತರು ಕಲಾಕೃತಿಗಳ ಫೋಟೊ ಕ್ಲಿಕ್ಕಿಸಿಕೊಂಡರು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಚಿತ್ರಸಂತೆಯಲ್ಲಿ ಕಲಾವಿದನೊಬ್ಬ ಯುವತಿಯ ಭಾವಚಿತ್ರ ಬಿಡಿಸಿದರು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಚಿತ್ರಸಂತೆಗೆ ಹಲವು ವರ್ಷಗಳಿಂದ ಬರುತ್ತಿದ್ದೇನೆ. ಹೆಚ್ಚಾಗಿ ಉತ್ಸವಗಳ ಕಲಾಕೃತಿ ರಚಿಸುತ್ತಿದ್ದು ಕಲಾಸಕ್ತರಿಂದ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ
ಮೀನಾಕ್ಷಿ ಸದಲಗಿ ಕಲಾವಿದೆ ಚಿತ್ರಸಂತೆಯಲ್ಲಿ ಇರಿಸಲಾಗಿದ್ದ ಕಲಾಕೃತಿಗಳನ್ನು ಕಲಾಪ್ರೇಮಿಗಳು ಕುತೂಹಲದಿಂದ ವೀಕ್ಷಿಸಿದರು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಿತ್ರಸಂತೆ ಉತ್ತಮ ವೇದಿಕೆಯಾಗಿದೆ. ಕಲಾಕೃತಿಗಳ ಖರೀದಿಗೆ ಜನರು ಆಸಕ್ತಿ ತೋರುತ್ತಿದ್ದಾರೆ
ಉಮೇಶ್ ನಾಯ್ಕ್ ಕಲಾವಿದ1500 ಕಲಾವಿದರು ಭಾಗಿ
ದೇಶದ ವಿವಿಧ ಭಾಗಗಳಿಂದ 1500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ ಕಲಾಕೃತಿಗಳನ್ನು ಪ್ರದರ್ಶಿಸಿದರು. ಕರ್ನಾಟಕದ ಜತೆಗೆ ಕೇರಳ ತಮಿಳುನಾಡು ಆಂಧ್ರಪ್ರದೇಶ ಗೋವಾ ಮಹಾರಾಷ್ಟ್ರ ಪಂಜಾಬ್ ಪಶ್ಚಿಮ ಬಂಗಾಳ ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಪಾಲ್ಗೊಂಡಿದ್ದರು. ವೃತ್ತಿನಿರತ ಕಲಾವಿದರ ಜತೆಗೆ ಹವ್ಯಾಸಿ ಕಲಾವಿದರು ಹಾಗೂ ಕಲಾ ವಿದ್ಯಾರ್ಥಿಗಳೂ ಭಾಗವಹಿಸಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ಶಿವಾನಂದ ಸರ್ಕಲ್‌ನಿಂದ ವಿಂಡ್ಸನ್ ಮ್ಯಾನರ್‌ವರೆಗೆ ಕುಮಾರಕೃಪಾ ರಸ್ತೆಯಲ್ಲಿ ಕ್ರೆಸೆಂಟ್ ರಸ್ತೆಯ ಆಯ್ದ ಸ್ಥಳದಲ್ಲಿ ಗಾಂಧಿಭವನ ರಸ್ತೆಯಲ್ಲಿ ಕಲಾಕೃತಿಗಳ ಪ್ರದರ್ಶನ ನಡೆಯಿತು. ಚಿತ್ರಸಂತೆ ಪ್ರಯುಕ್ತ ಚಿತ್ರಕಲಾ ಪರಿಷತ್ತಿನ 13 ಗ್ಯಾಲರಿಗಳಲ್ಲಿ ಪ್ರದರ್ಶನ ಪ್ರಾರಂಭವಾಗಿದ್ದು ಈ ಗ್ಯಾಲರಿಗಳಲ್ಲಿ ಇದೇ 31ರವರೆಗೂ ಪ್ರದರ್ಶನ ನಡೆಯಲಿದೆ.
₹ 5 ಕೋಟಿ ವಹಿವಾಟು
‘ಈ ಬಾರಿಯ ಚಿತ್ರಸಂತೆಯಲ್ಲಿ ಅಂದಾಜು ₹ 5 ಕೋಟಿ ವಹಿವಾಟು ನಡೆದಿದೆ. ಕಳೆದ ಬಾರಿಗಿಂತ ಶೇ 20 ರಷ್ಟು ವಹಿವಾಟು ಹೆಚ್ಚಾಗಿದೆ. 4 ಲಕ್ಷ ಜನರು ಭೇಟಿ ನೀಡಿದ್ದರು’ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದರು.