‘ಸಂಸಾರದಲ್ಲಿ ಸನಿದಪ’ ನಾಟಕ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ‘ತಿಂಗಳ ನಾಟಕ’ ಯೋಜನೆಯಡಿ ಇದೇ 20ರಂದು ಸಂಜೆ 6.30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಮುಚ್ಚಯದಲ್ಲಿ ‘ಸಂಸಾರದಲ್ಲಿ ಸನಿದಪ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಸಿರಿಗೇರಿಯ ಧಾತ್ರಿ ರಂಗಸಂಸ್ಥೆ ಈ ನಾಟಕವನ್ನು ಪ್ರಸ್ತುತಪಡಿಸಲಿದೆ. ಇಟಾಲಿಯನ್ ನಾಟಕಕಾರ ದಾರಿಯೋ ಫೋ ಅವರು ರಚಿಸಿದ ನಾಟಕವನ್ನು ಕೆ.ವಿ ಅಕ್ಷರ ಅವರು ಕನ್ನಡಕ್ಕೆ ತಂದಿದ್ದಾರೆ. ಮಂಡ್ಯ ರಮೇಶ್ ಅವರು ನಿರ್ದೇಶಿಸಿದ್ದಾರೆ.

ಹಾಸ್ಯನಟ ಎಂ.ಎಸ್. ಉಮೇಶ್ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಚಿಂದೋಡಿ ಬಂಗಾರೇಶ್ ಮತ್ತು ಡಿಂಗ್ರಿ ನಾಗರಾಜ್ ಭಾಗವಹಿಸುತ್ತಾರೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.

ರುಚಿತಾ ಶಾಸ್ತ್ರಿ ರಂಗಪ್ರವೇಶ

ಬೆಂಗಳೂರು: ಲೀಲಾ ನಾಟ್ಯ ಕಲಾ ವೃಂದವು ಇದೇ 23ರಂದು ಸಂಜೆ 5.30ಕ್ಕೆ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ರುಚಿತಾ ಶಾಸ್ತ್ರಿ ಅವರ ಭರತನಾಟ್ಯ ರಂಗಪ್ರವೇಶ ಹಮ್ಮಿಕೊಂಡಿದೆ.

ರುಚಿತಾ ಅವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಪಿ. ಪ್ರಭಾಕರ ಶಾಸ್ತ್ರಿ ಮತ್ತು ಉಷಾ ಅವರ ಪುತ್ರಿಯಾಗಿದ್ದು, ಉದಯ್ ಕೃಷ್ಣ ಉಪಾಧ್ಯಾಯ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ರಂಗಪ್ರವೇಶ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ, ಕಲಾವಿದರಾದ ರಾಧಾ ಶ್ರೀಧರ್, ಮೈಸೂರು ಎಲ್. ಲೀಲಾ ಕದಂಬಿ ಭಾಗವಹಿಸುತ್ತಾರೆ. ಎಲ್. ಲೀಲಾವತಿ ಉಪಾಧ್ಯಾಯ ಮತ್ತು ಟಿ.ಎಸ್. ನಾಗರಾಜ ಉಪಾಧ್ಯಾಯ ಉಪಸ್ಥಿತರಿರುತ್ತಾರೆ.

‘ಲೈಟ್ಸ್ ಆಫ್!’ ನಾಟಕ ಪ್ರದರ್ಶನ

ಬೆಂಗಳೂರು: ಅನೇಕ ತಂಡವು ಇದೇ 19ರಂದು ಸಂಜೆ 7 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ಲೈಟ್ಸ್ ಆಫ್!’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಪೀಟರ್ ಷಾಫರ್ ಅವರ ಈ ನಾಟಕವನ್ನು ಸುರೇಶ್ ಆನಗಳ್ಳಿ ನಿರ್ದೇಶಿಸಿದ್ದಾರೆ. ಟಿಕೆಟ್ಗಳು ಬುಕ್ಮೈ ಶೋದಲ್ಲಿ ಲಭ್ಯವಿದೆ.

‘ಅಂಧಯುಗ’ ನಾಟಕ ಪ್ರದರ್ಶನ

ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಇರುವ ತನ್ನ ಕೇಂದ್ರದಲ್ಲಿ ಇದೇ 18ರಿಂದ 23ರವರೆಗೆ ಸಂಜೆ 7 ಗಂಟೆಗೆ ‘ಅಂಧಯುಗ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಕೇಂದ್ರದ 10ನೇ ಬ್ಯಾಚ್ನ ವಿದ್ಯಾರ್ಥಿಗಳು ಈ ನಾಟಕ ಪ್ರದರ್ಶಿಸಲಿದ್ದಾರೆ. ಧರ್ಮವೀರ ಭಾರತಿ ಅವರು ಈ ನಾಟಕ ರಚಿಸಿದ್ದು, ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ನಾಟಕವನ್ನು ಆರ್. ರಾಜು ನಿರ್ದೇಶಿಸಿದ್ದಾರೆ. ಪ್ರವೇಶ ಉಚಿತ ಇರಲಿದೆ ಎಂದು ಕೇಂದ್ರದ ನಿರ್ದೇಶಕಿ ವೀಣಾ ಶರ್ಮಾ ಭೂಸನೂರುಮಠ ತಿಳಿಸಿದ್ದಾರೆ.

ಪ್ರತಿ ಗುರುವಾರ ಪ್ರಕಟವಾಗುವ ‘ಸಾಂಸ್ಕೃತಿಕ ಮುನ್ನೋಟ’ ಅಂಕಣದಲ್ಲಿ ಪ್ರಕಟಿಸಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರಗಳನ್ನು ಈ ಕೆಳಗಿನ ಇ–ಮೇಲ್ಗೆ (ಬುಧವಾರ ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.