ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ ತನ್ನಿ
ಬೆಂಗಳೂರು-ಬಿಡದಿ- ಮೈಸೂರು, ಬೆಂಗಳೂರು- ಹಾರೋಹಳ್ಳಿ- ಕನಕಪುರ, ಬೆಂಗಳೂರು- ನೆಲಮಂಗಲ- ತುಮಕೂರು, ಬೆಂಗಳೂರು- ಏರ್ ಪೋರ್ಟ್- ಚಿಕ್ಕಬಳ್ಳಾಪುರ, ಬೆಂಗಳೂರು- ಹೊಸಕೋಟೆ- ಕೋಲಾರಕ್ಕೆ ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್) ಯೋಜನೆಯಡಿ ‘ನಮೋ ಭಾರತ್ ರೈಲು ಯೋಜನೆ’ ಅನುಷ್ಠಾನಗೊಳಿಸಲು ಡಿ.ಕೆ. ಶಿವಕುಮಾರ್ ಮನವಿ ಸಲ್ಲಿಸಿದರು.
ನಗರದಲ್ಲಿ ದಿನವೊಂದಕ್ಕೆ 6,500 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು ಇದರ ವೈಜ್ಞಾನಿಕ ವಿಲೇವಾರಿಗೆ ಸಿಎನ್‌ಜಿ ತಯಾರಿಕಾ ಘಟಕ, ಗೊಬ್ಬರ ಘಟಕ, ವೇಸ್ಟ್ ಎನರ್ಜಿ ಘಟಕಗಳ ಸ್ಥಾಪನೆಗೆ ಬೆಂಬಲ ನೀಡುವಂತೆ ಕೋರಿದ್ದಾರೆ.