ಬೆಂಗಳೂರು: ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ಹಾಗೂ ನಗರ ಪೊಲೀಸರು, ಇಬ್ಬರು ಮಹಿಳೆಯರು ಸೇರಿ ಒಟ್ಟು 16 ಆರೋಪಿಗಳನ್ನು ಬಂಧಿಸಿದ್ದಾರೆ.

ಮಾರತ್ಹಳ್ಳಿ, ವಿದ್ಯಾರಣ್ಯಪುರ, ಮಹದೇವಪುರ, ಗೋವಿಂದಪುರ, ಚಾಮರಾಜಪೇಟೆ, ಎಸ್.ಆರ್.ನಗರ ಮತ್ತು ನಂದಿನಿ ಲೇಔಟ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಆಧರಿಸಿ, ಬಾತ್ಮೀದಾರರು ತಿಳಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳಿಂದ 3,000 ಎಂಡಿಎಂಎ ಎಕ್ಸ್ಟೆಸಿ ಪಿಲ್ಸ್, 230 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 48 ಕೆ.ಜಿ 750 ಗ್ರಾಂ ಗಾಂಜಾ, 306 ಗ್ರಾಂ ಹೈಡ್ರೊ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮಾರುಕಟ್ಟೆ ಮೌಲ್ಯ ₹5.24 ಕೋಟಿ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ವಿದೇಶಿ ಮತ್ತು ಹೊರ ರಾಜ್ಯದ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರಿದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದರು.

ಮಾರತ್ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ₹15 ಲಕ್ಷ ಮೌಲ್ಯದ 13 ಕೆ.ಜಿ ಗಾಂಜಾ, ವಿದ್ಯಾರಣ್ಯಪುರದಲ್ಲಿ ₹12 ಲಕ್ಷ ಮೌಲ್ಯದ 12.8 ಕೆ.ಜಿ. ಗಾಂಜಾ, ಮಹದೇವಪುರದಲ್ಲಿ ₹31 ಲಕ್ಷ ಮೌಲ್ಯದ 306 ಗ್ರಾಂ ಹೈಡ್ರೊ ಗಾಂಜಾ, 10.9 ಕೆ.ಜಿ ಗಾಂಜಾ, ಗೋವಿಂದಪುರದಲ್ಲಿ ಅಂದಾಜು 6 ಕೆ.ಜಿ ಗಾಂಜಾ, ಚಾಮರಾಜಪೇಟೆಯಲ್ಲಿ 100 ಗ್ರಾಂ ಎಂಡಿಎಂಎ ಕ್ರಿಸ್ಟಲ್, ಎಸ್ಆರ್ ನಗರದಲ್ಲಿ 4.5 ಕೆ.ಜಿ. ಗಾಂಜಾ, ನಂದಿನಿ ಬಡಾವಣೆಯಲ್ಲಿ 950 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶ, ಹೊರ ರಾಜ್ಯ ಹಾಗೂ ಸ್ಥಳೀಯ ಅಪರಿಚಿತ ವ್ಯಕ್ತಿಗಳಿಂದ ಎಂಡಿಎಂಎ ಎಕ್ಸ್ಟೆಸಿ ಪಿಲ್ಸ್, ಎಂಡಿಎಂಎ ಕ್ರಿಸ್ಟೆಲ್, ಗಾಂಜಾ ಮತ್ತು ಹೈಡ್ರೊ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ, ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ನಾಲ್ವರು ಗಡಿಪಾರು:

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ಬಾಗಲೂರು, ವೈಟ್ಫೀಲ್ಡ್, ಪರಪ್ಪನ ಅಗ್ರಹಾರ ಹಾಗೂ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೀಸಾ ಅವಧಿ ಮುಗಿದಿದ್ದರೂ ವಾಸವಾಗಿದ್ದುಕೊಂಡು ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ.

9 ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದು, ವಿದೇಶಿಯರ ಪ್ರಾದೇಶಿಕ ನೋಂದಣಿ ಪ್ರಾಧಿಕಾರ (ಎಫ್ಆರ್ಆರ್ಒ) ಆದೇಶದಂತೆ ವಿದೇಶಿಯರ ಬಂಧನ ಕೇಂದ್ರಕ್ಕೆ ಬಿಡಲಾಗಿದೆ. ಈ ಪೈಕಿ ನೈಜೀರಿಯಾದ ಕೊಫಿ ವಿಕ್ಟರ್, ಫಾತಿಮಾ ಅನ್ವಿತಾ, ಟಿಮೋತಿ, ಕಿಲ್ವಾನ್ ಅವರನ್ನು ಆ ದೇಶಕ್ಕೆ ಗಡಿಪಾರು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.