ರಸ್ತೆ ಪುನಃಸ್ಥಾಪನೆ:
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಯುಟಿಲಿಟಿ ಸಂಸ್ಥೆಗಳು ವಿದ್ಯುತ್ ಕೇಬಲ್, ನೀರಿನ ಕೊಳವೆಮಾರ್ಗ, ಒಳಚರಂಡಿ, ಟೆಲಿಕಾಂ ಮಾರ್ಗ ಸೇರಿದಂತೆ ವಿವಿಧ ಮೂಲ
ಸೌಕರ್ಯ ಕಾಮಗಾರಿಗಳ ನಿಮಿತ್ತ ರಸ್ತೆಗಳನ್ನು ಕತ್ತರಿಸಲಾಗುತ್ತಿದೆ. ಇಂತಹ ಕಾಮಗಾರಿಗಳ ನಂತರ ರಸ್ತೆ ಪುನಃಸ್ಥಾಪನೆ ಸಮರ್ಪಕವಾಗಿ ನಡೆಯದಿರುವುದ
ರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ, ಅಪಘಾತಗಳ ಸಂಭವ ಹಾಗೂ ರಸ್ತೆ ಹಾನಿ ಹೆಚ್ಚುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಅಂತಹ ರಸ್ತೆಗಳನ್ನು ಮೂಲ ಸ್ಥಿತಿಗೆ ತರುವ ಸಲುವಾಗಿ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರ ನೇತೃತ್ವದಲ್ಲಿ ನಗರ ಪಾಲಿಕೆ ಎಂಜಿನಿಯರಿಂಗ್ ವಿಭಾಗ, ಬೆಸ್ಕಾಂ, ಕೆಪಿಟಿಸಿಎಲ್, ಜಲಮಂಡಳಿ, ಗೇಲ್, ಸಂಚಾರ ಪೊಲೀಸ್, ಹಾಗೂ ಒಎಫ್‌ಸಿ ಅಪರೇಟರ್‌ಗಳನ್ನು ಒಳಗೊಂಡ ‘ರಸ್ತೆ ಪುನಃ ಸ್ಥಾಪನೆ’ ಸಮಿತಿ ರಚಿಸಲಾಗಿದೆ ಎಂದು ರಮೇಶ್ ತಿಳಿಸಿದರು.