ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.16ಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವ

Last Updated 14 ಸೆಪ್ಟೆಂಬರ್ 2022, 5:11 IST
ಅಕ್ಷರ ಗಾತ್ರ

ಬೆಂಗಳೂರು: ಏಮ್‌ ಸಂಸ್ಥೆಯ ವತಿಯಿಂದ ಸೆ. 16 ಮತ್ತು 17ರಂದು ಪಂಡಿತ್ ಭೀಮಸೇನ್ ಜೋಶಿ ಮತ್ತು ರಾಣಿ ವಿಜಯಾ ದೇವಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಸಪ್ತಕ ಸಂಸ್ಥೆಯ ಸಹಯೋಗದಲ್ಲಿ ಸೆ. 16ರಂದು ಸಂಜೆ 6.30ಕ್ಕೆ ‘ನಾದಾರಾಧನೆ’ ಕಾರ್ಯಕ್ರಮ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ.

ಖ್ಯಾತ ಕೊಳಲು ವಾದಕ ರೋಣು ಮಜುಮದಾರ, ಸಿತಾರ್ ವಾದಕ ಸ್ವೀಕಾರ್ ಕಟ್ಟಿ, ಹಾಗೂ ಹೃಷಿಕೇಶ್ ಮಜುಮದಾರ ಅವರ ಕೊಳಲು ವಾದನದ ಜುಗಲ್‌ಬಂದಿ ಕಾರ್ಯಕ್ರಮ ನಡೆಯಲಿದ್ದು, ರಾಜೇಂದ್ರ ನಾಕೋಡ್ ಅವರು ತಬಲಾ ಸಾಥ್ ನೀಡಲಿದ್ದಾರೆ. ನಂತರ ಪರಮೇಶ್ವರ ಹೆಗಡೆ ಅವರ ಸಂಗೀತ ಕಛೇರಿ ನಡೆಯಲಿದ್ದು, ಗುರುಮೂರ್ತಿ ಅವರು ತಬಲಾ, ಮಧುಸೂದನ ಭಟ್ಟ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

ಸೆ. 17ರಂದು (ಶನಿವಾರ) ಸಂಜೆ 6.30ಕ್ಕೆ ಎಸ್‌.ಪಿ.ಸಿ.ಎ ಸಂಸ್ಥೆಯ ಯುವ ಕಲಾವಿದರಿಂದ ‘ಲಯ ವೈಭವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 7 ಗಂಟೆಗೆ ಅಂತರರಾಷ್ಟ್ರೀಯ ಗಾಯಕಿ ಅಶ್ವಿನಿ ಭಿಡೆ ದೇಶಪಾಂಡೆಯವರ ಸಂಗೀತ ಕಾರ್ಯಕ್ರಮವಿದ್ದು, ರವೀಂದ್ರ ಯಾವಗಲ್‌ ಅವರು ತಬಲಾ, ವ್ಯಾಸಮೂರ್ತಿ ಕಟ್ಟಿ ಅವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT