ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಇದೇ 25ರಂದು 'ಟ್ರಾನ್ಸ್ಫಾರ್ಮ್ ಕೆರಿಯರ್ ಫೇರ್ 2025’ ಶೀರ್ಷಿಕೆಯಡಿ ಶೈಕ್ಷಣಿಕ ಪ್ರದರ್ಶನ ಮತ್ತು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ವಿಶ್ವವಿದ್ಯಾಲಯದ ಹೊಸ ಅಕಾಡೆಮಿಕ್ ಬ್ಲಾಕ್ನಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ. ವಿವಿಧ ಕ್ಷೇತ್ರಗಳ ಪ್ರತಿಭಾವಂತ ವಿದ್ಯಾರ್ಥಿಗಳು, ಪದವೀಧರರು ಮತ್ತು ವೃತ್ತಿಪರು ಮತ್ತು ಪ್ರಮುಖ ಕಂಪನಿಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವುದು ಈ ಮೇಳದ ಉದ್ದೇಶವಾಗಿದೆ.

60ಕ್ಕೂ ಅಧಿಕ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸುತ್ತಿವೆ. ಉದ್ಯೋಗ, ಇಂಟರ್ನ್ಷಿಪ್ ಮತ್ತು ವೃತ್ತಿ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಅವಕಾಶಗಳನ್ನು ನೀಡಲಿವೆ. ಭಾಗವಹಿಸುವವರಿಗೆ ಸ್ಥಳದಲ್ಲಿಯೇ ಸಂದರ್ಶನ, ಪರಿಚಯಪತ್ರ (ಬಯೊಡೇಟಾ) ತಯಾರಿಕೆ, ಸಂದರ್ಶನ ತಂತ್ರಗಳು ಮತ್ತು ವೃತ್ತಿ
ಬೆಳವಣಿಗೆ ಕುರಿತ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಅವಕಾಶ ಲಭ್ಯವಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ. ಮೇಳದಲ್ಲಿ ಪಾಲ್ಗೊಳ್ಳುವ ಆಸಕ್ತರು https://tcf.edufactory.in ಜಾಲತಾಣದ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ www.bcu.ac.in ಜಾಲತಾಣ
ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.