ಬೆಂಗಳೂರು: ಶ್ರೀ ಧರ್ಮರಾಯಸ್ವಾಮಿ ದೇವಾಲಯದ 2024ನೇ ಸಾಲಿನ ಕರಗ ಮಹೋತ್ಸವಕ್ಕೆ ಬಿಡುಗಡೆಯಾಗಿದ್ದ ₹60 ಲಕ್ಷ ಅನುದಾನದಲ್ಲಿ ₹22.5 ಲಕ್ಷ ದುರುಪಯೋಗವಾಗಿದೆ. ಇದನ್ನು ದೇವಾಲಯದ ಹಿಂದಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಖಜಾಂಚಿಯಿಂದ ವಸೂಲಿ ಮಾಡಲು ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಕೆಯಾಗಿದೆ.

2024ನೇ ಸಾಲಿನ ಕರಗ ಮಹೋತ್ಸವದಲ್ಲಿ ಹಣ ದುರುಪಯೋಗವಾಗಿದೆ ಎಂಬ ದೂರಿನ ಮೇರೆಗೆ, ಜಿಲ್ಲಾಧಿಕಾರಿಯವರು ಲೆಕ್ಕ ಪರಿಶೋಧನೆ ನಡೆಸಲು ತಂಡವನ್ನು ನಿಯೋಜಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ, ಧಾರ್ಮಿಕ ದತ್ತಿ ತಹಶೀಲ್ದಾರ್, ವಿನಾಯಕ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ, ಬಿಬಿಎಂಪಿಯ ವ್ಯವಸ್ಥಾಪಕರನ್ನು ಒಳಗೊಂಡ ತಂಡ ವರದಿ ನೀಡಿದೆ.

ಕರಗ ಮಹೋತ್ಸವದ ಅನುದಾನವನ್ನು ಬಿಬಿಎಂಪಿ, ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಾಗೂ ಖಜಾಂಚಿ ಅವರಿಂದ ಚಾಲಿತವಾದ ಖಾತೆಗೆ ₹60 ಲಕ್ಷವನ್ನು ವರ್ಗಾಯಿಸಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿ ನಿಯಮಗಳ ಪ್ರಕಾರ, ಕಾರ್ಯನಿರ್ವಾಹಕ ಅಧಿಕಾರಿ ಬಟವಾಡೆ ಅಧಿಕಾರಿಯಾಗಿದ್ದು, ಅವರ ಖಾತೆಗೆ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ, ಬಿಬಿಎಂಪಿಯು ಸಮಿತಿಯ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡಿದೆ.

ಲೆಕ್ಕಪರಿಶೋಧನಾ ತಂಡಕ್ಕೆ ಅನುದಾನದ ವೆಚ್ಚದ ಮಾಹಿತಿ ನೀಡಿರುವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಬಿಲ್ದಾರರು ಹಾಗೂ ದೇವಸ್ಥಾನದಲ್ಲಿ ರೂಢಿ–ಪದ್ಧತಿಯಂತೆ ವಾರಸುದಾರರಿಗೆ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಿ, ನೀಡಲಾಗಿದೆ ಎಂದಿದ್ದಾರೆ. ಸಮಿತಿ ಸಭೆ 2024ರ ಅ.24ರಂದು ನಡೆದಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಮತ್ತು ಸಮಿತಿ ಸಭೆ ನಿರ್ಣಯಕ್ಕೂ ಮುನ್ನವೇ ಬ್ಯಾಂಕ್ ಖಾತೆಯಿಂದ ಹಣವನ್ನು ಡ್ರಾ ಮಾಡಲಾಗಿದೆ. ಇದು ಆರ್ಥಿಕ ಸಂಹಿತೆ 1958 ಕಲಂ 14ರ ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಖಾತೆಯಿಂದ ‘ಸೆಲ್ಫ್’ ಮೂಲಕ ₹22,50,000 ಡ್ರಾ ಮಾಡಿಕೊಳ್ಳಲಾಗಿದೆ. ಇದರ ಲೆಕ್ಕಪತ್ರ ಕೇಳಿದಾಗ, ಯಾರಿಗೆ ಪಾವತಿಯಾಗಿದೆ ಎಂಬುದರ ಮಾಹಿತಿ ನೀಡಿಲ್ಲ. ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಸ್ವಂತ ಧನಾದೇಶದ ಮೇಲೆ ನಗದು ರೂಪದಲ್ಲಿ ಡ್ರಾ ಮಾಡುವುದು ನಿಷಿದ್ಧ. ಅದಕ್ಕೆ ದಾಖಲಾತಿಗಳನ್ನೂ ನೀಡಿಲ್ಲ. ಆದ್ದರಿಂದ ನಗದು ರೂಪದಲ್ಲಿ ಡ್ರಾ ಮಾಡಿರುವ ₹22,50,000 ಅನ್ನು ವಸೂಲು ಮಾಡಲು ಸಂಬಂಧಿಸಿದವರಿಗೆ ಸೂಚಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

2024ರಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿದ್ದವರು: ಅಧ್ಯಕ್ಷ– ಕೆ. ಸತೀಶ್, ಸದಸ್ಯರು– ಗಾಯತ್ರಿ, ಅಮರನಾರಾಯಣ, ಎಚ್.ಬಿ. ಸುಮಾ, ಬಾಲಕೃಷ್ಣ, ಸಿ. ಶ್ರೀಧರ್, ಬಿ.ಎಚ್. ಕೃಷ್ಣಮೂರ್ತಿ, ಜ್ಞಾನೇಂದ್ರ.

‘ಕರಗ ಉತ್ಸವದ ಅನುದಾನ ಬಿಡುಗಡೆಗೆ ಶೇ 20ರಷ್ಟು ಕಮಿಷನ್ ಕೇಳಲಾಗುತ್ತಿದೆ’ ಎಂದು ಧರ್ಮರಾಯಸ್ವಾಮಿ ದೇವಾಲಯದ ನಿಕಟಪೂರ್ವ ಆಡಳಿತ ಮಂಡಳಿ ಅಧ್ಯಕ್ಷ ಕೆ. ಸತೀಶ್ ಅವರು ಫೆ.3ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ದಾಖಲೆ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.