ಕೆಂಗೇರಿ: ವೃದ್ಧರು, ಅಂಗವಿಕಲರು, ಅಶಕ್ತರಿಗೆ ಪಾದಚಾರಿ ಮೇಲ್ಸೇತುವೆ ಹತ್ತಿಳಿಯುವುದೇ ಸವಾಲು | ಒಂದೂವರೆ ವರ್ಷದಿಂದ ಅರ್ಧಕ್ಕೆ ನಿಂತಿರುವ ಲಿಫ್ಟ್ ಕಾಮಗಾರಿ
ಸ್ಕೈ ವಾಕ್ ಬದಲು ರಸ್ತೆ ವಿಭಜಕ ದಾಟಿ ಬರುತ್ತಿರುವ ಪ್ರಯಾಣಿಕರು
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್

ಲಿಫ್ಟ್ ಅಳವಡಿಸಲು ಜಾಗ ಬಿಟ್ಟಿದ್ದಾರೆ. ಆದರೆ ಲಿಫ್ಟ್ ಅಳವಡಿಸುತ್ತಿಲ್ಲ. ನಮ್ಮಂಥ ವಯಸ್ಸಾದವರು ಮೆಟ್ಟಿಲು ಹತ್ತಿಕೊಂಡು ಹೋಗುವುದು ಕಷ್ಟ. ಬಿಬಿಎಂಪಿಯವರು ಲಿಫ್ಟ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಿದರೆ ಹಿರಿಯ ನಾಗರಿಕರ ಮಂಡಿ ನೋವು ಹೆಚ್ಚಾಗುವುದನ್ನು ತಪ್ಪಿಸಬಹುದು.
ರಾಜೇಂದ್ರ ಕೇಂದ್ರೀಯ ಅಬಕಾರಿ ನಿವೃತ್ತ ಅಧಿಕಾರಿಪಾದಚಾರಿ ಮೇಲ್ಸೇತುವೆಯ ಲಿಫ್ಟ್ ನಿರ್ಮಾಣ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್

ಲಿಫ್ಟ್ ಅಳವಡಿಕೆ ಕಾಮಗಾರಿ ಮತ್ತೆ ಶುರುವಾಗುತ್ತದೆ ಎಂದು ಹೇಳುತ್ತಾರೆ. ಬೇಗ ಆದರೆ ಜನರಿಗೆ ಉಪಯೋಗವಾಗುತ್ತದೆ. ಎಕ್ಸ್‌ಪ್ರೆಸ್ ಬಸ್‌ಗಳಲ್ಲದೇ ದೊಡ್ಡಾಲದಮರ ರಾಮೋಹಳ್ಳಿ ಕೆಂಗೇರಿ ಉಪನಗರ ಸಹಿತ ಹಳ್ಳಿ ಕಡೆಯಿಂದ ಬರುವ ಬಸ್‌ಗಳೆಲ್ಲ ನಿಲ್ದಾಣಕ್ಕೆ ಹೋಗದೇ ಇಲ್ಲೇ ಪ್ರಯಾಣಿಕರನ್ನು ಇಳಿಸಿ ಹೋಗುವುದರಿಂದ ಸ್ಕೈವಾಕ್‌ನಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ನಿರ್ಮಾಣ ಮಾಡುವಾಗಲೇ ಸರಿಯಾಗಿ ಯೋಜನೆ ರೂಪಿಸಿ ಹತ್ತಿ ಇಳಿಯುವ ಮೆಟ್ಟಿಲುಗಳು ಹೆಚ್ಚು ಅಗಲವಾಗಿ ಇರುವಂತೆ ಮಾಡಿದ್ದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ.
ರೂಪಾ ವ್ಯಾಪಾರಿ ಕೆಂಗೇರಿಗಿಜಿಗುಡುತ್ತಿರುವ ಪಾದಚಾರಿ ಮೇಲ್ಸೇತುವೆ
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್

ಆಕಾಶದೆತ್ತರಕ್ಕೆ ಸೇತುವೆ ಕಟ್ಟಿಟ್ಟಿದ್ದಾರೆ. ಹಳ್ಳಿಯಿಂದ ಬರುವ ನಾವು ಚೀಲ ಹೊತ್ತುಕೊಂಡು ಹತ್ತುವುದೇ ಕಷ್ಟ. ಅಪರೂಪಕ್ಕೆ ಬರುವ ನಾವು ಅರ್ಧ ಮೆಟ್ಟಿಲು ಹತ್ತಿ ಕುಳಿತುಕೊಳ್ಳಬೇಕಿದೆ. ಲಿಫ್ಟ್ ಅಳವಡಿಸುತ್ತಾರಂತೆ. ಅದರ ಜೊತೆಗೆ ಎಸ್ಕಲೇಟರ್ ಕೂಡ ಅಳವಡಿಸಿದರೆ ಅನುಕೂಲವಾಗಬಹುದು.
ಕವಿತಾ ಜಿಗಣಿ ಪ್ರಯಾಣಿಕರುವಾಹನ ದಟ್ಟಣೆಯ ನಡುವೆ 108 ಆಂಬುಲೆನ್ಸ್ ಸಿಲುಕಿಕೊಂಡಿರುವುದು
ಪ್ರಜಾವಾಣಿ ಚಿತ್ರ: ಎಂ.ಎಸ್. ಮಂಜುನಾಥ್