ಬೆಂಗಳೂರು: ವಾರದಿಂದ ತರಕಾರಿ, ಹಣ್ಣಿನ ಬೆಲೆಗಳು ಸ್ಥಿರವಾಗಿವೆ. ಮುಂದಿನ ವಾರದಲ್ಲಿ ಹೆಚ್ಚು ಮಳೆಯಾದರೆ ತರಕಾರಿ ದರಗಳು ಏರಲಿವೆ ಎನ್ನುತ್ತಾರೆ ವ್ಯಾಪಾರಿಗಳು.

ಲಾಕ್ಡೌನ್ ಜಾರಿಯಾದ ಬಳಿಕ ಎಲ್ಲ ತರಕಾರಿಗಳ ದರ ನೆಲಕಚ್ಚಿದ್ದವು. ಈಗ ಲಾಕ್ಡೌನ್ ಸಡಿಲಗೊಂಡರೂ ಮಾರುಕಟ್ಟೆ ಚಟುವಟಿಕೆ ಮಂದಗತಿಯಲ್ಲೇ ಸಾಗಿದೆ.

'ವಾಡಿಕೆಯಂತೆ ರಾಜ್ಯದಲ್ಲಿ ಮಳೆ ಸುರಿದಿದ್ದರೆ, ಈ ವೇಳೆಗೆ ಹಣ್ಣು, ತರಕಾರಿಗಳ ಬೆಲೆ ಏರುತ್ತಿತ್ತು. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚೇನೂ ಮಳೆಯಾಗಿಲ್ಲ. ಇದರಿಂದ ರೈತರು ಬೆಳೆದ ತರಕಾರಿಗಳು ಎಂದಿನಂತೆ ಮಾರುಕಟ್ಟೆಗೆ ಆವಕವಾಗಿವೆ. ಹೆಚ್ಚು ಕಾರ್ಯಕ್ರಮಗಳು ನಡೆಯದೆ ಇರುವುದರಿಂದ ಬೇಡಿಕೆಯೂ ಇಲ್ಲ' ಎಂದು ದಾಸನಪುರ ಎಪಿಎಂಸಿ ಮಾರುಕಟ್ಟೆಯ ತರಕಾರಿ-ಸೊಪ್ಪು ಸಗಟು ವ್ಯಾಪಾರಿ ಕುಮಾರ್ ತಿಳಿಸಿದರು.

'ಹೋಟೆಲ್ಗಳನ್ನು ತೆರೆಯಲು ಈ ವಾರದಲ್ಲಿ ಅನುಮತಿ ಸಿಗಲಿದೆ ಹಾಗೂ ಮಳೆಯೂ ಹೆಚ್ಚಾಗಲಿದೆ. ಇದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿದ್ದು, ದರಗಳೂ ಏರಲಿವೆ' ಎಂದರು.

ಸೊಪ್ಪಿನ ದರ ಏರಿಕೆ: ಕಳೆದ ವಾರ ಪ್ರತಿ ಕಟ್ಟಿಗೆ ₹30ರಷ್ಟಿದ್ದ ಕೊತ್ತಂಬರಿ ದರ ಈಗ ₹35ಕ್ಕೇರಿದೆ. ಮೆಂತ್ಯೆ ಮತ್ತು ಸಬ್ಬಕ್ಕಿ ಸೊಪ್ಪು ₹15, ಪಾಲಕ್ ₹10, ದಂಟು ₹8 ಹಾಗೂ ಅರಿವೆ ಸೊಪ್ಪು ₹6ರಂತೆ ಮಾರಾಟ ಆಗುತ್ತಿದೆ. ಎಲ್ಲ ಸೊಪ್ಪಿನ ದರಗಳು ಕನಿಷ್ಠ ₹2 ಏರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.