ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

ನಮ್ಮ ಮೆಟ್ರೊ ಪ್ರಯಾಣ ದರ 10 ರೂಪಾಯಿಗೆ 1 ರೂಪಾಯಿ, ಗರಿಷ್ಠ 5 ರೂಪಾಯಿ ಏರಿಕೆ

Published : 4 ಫೆಬ್ರುವರಿ 2026, 14:16 IST
Last Updated : 4 ಫೆಬ್ರುವರಿ 2026, 20:20 IST
ಫಾಲೋ ಮಾಡಿ
Comments
‘ದುಂದುವೆಚ್ಚ ಕಡಿಮೆ ಮಾಡಿ’
‘ಬಿಎಂಆರ್‌ಸಿಎಲ್‌ನಲ್ಲಿ ದುಂದು ವೆಚ್ಚ ಕಡಿಮೆ ಮಾಡಿದರೆ ಸಾಕು ಪ್ರಯಾಣದರ ಹೆಚ್ಚಳ ಮಾಡಬೇಕಿಲ್ಲ. ಮಾತ್ರವಲ್ಲ. ಈಗಿರುವ ದರವನ್ನೂ ಕಡಿಮೆ ಮಾಡಬಹುದು’ ಎಂದು ಬಿಎಂಆರ್‌ಸಿಎಲ್‌ ನೌಕರರ ಯೂನಿಯನ್‌ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ತಿಳಿಸಿದರು. ‘₹3 ಲಕ್ಷ ವೇತನವಿದ್ದ ಒಬ್ಬ ಅಧಿಕಾರಿ ತನ್ನ ವೇತನವನ್ನು ₹1.50 ಲಕ್ಷಕ್ಕೂ ಹೆಚ್ಚು ಏರಿಕೆ ಮಾಡಿಸಿಕೊಂಡಿದ್ದಾರೆ. ಇದೇ ರೀತಿ ಕೆಲವು ಅಧಿಕಾರಿಗಳು ವೇತನ ವಿಪರೀತ ಹೆಚ್ಚಳ ಮಾಡಿಕೊಂಡಿದ್ದಾರೆ. ಲೋಕೊ ಪೈಲಟ್‌, ಎಂಜಿನಿಯರ್‌ ಸಹಿತ ದುಡಿಯುವ ವರ್ಗಕ್ಕೆ ಈ ರೀತಿ ಹೆಚ್ಚಳ ಮಾಡುತ್ತಿಲ್ಲ. ಬೇರೆ ಬೇರೆ ಇಲಾಖೆಗಳಲ್ಲಿ ನಿವೃತ್ತರಾದ ಸುಮಾರು 300 ಅಧಿಕಾರಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ರೀತಿ ₹10 ಕೋಟಿಯವಷ್ಟು ದುಂದುವೆಚ್ಚ ಮಾಡಲಾಗುತ್ತಿದೆ. ಇದನ್ನೆಲ್ಲ ನಿಯಂತ್ರಿಸುವುದು ಬಿಟ್ಟು ಪ್ರಯಾಣಿಕರ ಮೆಲೆ ಹೊರೆ ಹೊರಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT