ಫೀಡರ್ ಬಸ್ ಸೇವೆಗೆ ಚಾಲನೆ:
ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗದಲ್ಲಿ ಮೆಟ್ರೊ ರೈಲುಗಳ ಸಂಚಾರ ಸೋಮವಾರ ಆರಂಭವಾಗಿದೆ. ಇದರ ಬೆನ್ನಲ್ಲೇ ಫೀಡರ್ ಬಸ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಚಾಲನೆ ನೀಡಿದರು. ಎಲೆಕ್ಟ್ರಾನಿಕ್ಸ್ ಸಿಟಿ ವಿಪ್ರೊ ಗೇಟ್, ಕೊಡತಿ ವಿಪ್ರೊ ಗೇಟ್, ಬೊಮ್ಮಸಂದ್ರ, ಕೋನಪ್ಪನ ಅಗ್ರಹಾರದಿಂದ ಫೀಡರ್ ಬಸ್ ಸೇವೆ ಇರಲಿದೆ. ಮೂರು ಮಾರ್ಗದ ವಿವಿಧ ನಿಲ್ದಾಣಗಳಿಂದ ಪ್ರತಿ ದಿನ 1.20 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೆಟ್ರೊ ಫೀಡರ್ ಬಸ್ ಸೇವೆ ಪಡೆಯುತ್ತಿದ್ದಾರೆ.