ಬೆಂಗಳೂರು: ನಮ್ಮ ಮೆಟ್ರೊದ ಜಯದೇವ ಆಸ್ಪತ್ರೆಯ ನಿಲ್ದಾಣ ಸದ್ಯ ದೇಶದ ಅತಿ ಎತ್ತರದ ಮೆಟ್ರೊ ನಿಲ್ದಾಣವಾಗಿದ್ದು, ಅದನ್ನೂ ಮೀರಿಸುವ ಎರಡು ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗಲಿವೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್ಸಿಎಲ್) ಹೇಳಿದೆ.

ನಮ್ಮ ಮೆಟ್ರೊ 3ನೇ ಹಂತದಲ್ಲಿ ಗೋರಗುಂಟೆಪಾಳ್ಯ ಮತ್ತು ಮೈಸೂರು ರಸ್ತೆಯ ಮೆಟ್ರೊ ನಿಲ್ದಾಣಗಳು 33 ಮೀಟರ್ ಮತ್ತು 32 ಮೀಟರ್ ಎತ್ತರದಲ್ಲಿ ರೈಲ್ವೆ ಹಳಿ ಹೊಂದಲಿವೆ ಎಂದು ತಿಳಿಸಿದೆ.

ಹಳದಿ ಮತ್ತು ಗುಲಾಬಿ ಮಾರ್ಗಗಳ ನಡುವಿನ ಇಂಟರ್ಚೇಂಜ್ ಆಗಿರುವ ಜಯದೇವ ಆಸ್ಪತ್ರೆಯ ನಿಲ್ದಾಣದ ಹಳಿಗಳು 29 ಮೀಟರ್ ಎತ್ತರದಲ್ಲಿದ್ದು, ಇದು ಸದ್ಯ ದೇಶದ ಅತಿ ಎತ್ತರದ ಮೆಟ್ರೊ ನಿಲ್ದಾಣವಾಗಿದೆ.

ಹಂತ 3 ಎರಡು ಕಾರಿಡಾರ್ಗಳನ್ನು ಹೊಂದಿರುತ್ತದೆ. ಆರೆಂಜ್ ಲೈನ್ (32.3 ಕಿಮೀ) ಜೆಪಿ ನಗರ 4ನೇ ಹಂತವನ್ನು ಕೆಂಪಾಪುರಕ್ಕೆ ಔಟರ್ ರಿಂಗ್ ರೋಡ್ ಮೂಲಕ ಸಂಪರ್ಕಿಸುತ್ತದೆ. ಸಿಲ್ವರ್ ಲೈನ್(12.15 ಕಿಮೀ) ಮಾಗಡಿ ರಸ್ತೆಯ ಉದ್ದಕ್ಕೂ ಹೊಸಹಳ್ಳಿಯಿಂದ ಕಡಬಗೆರೆಗೆ ಸಂಪರ್ಕಿಸುತ್ತದೆ.

ಎರಡೂ ಮಾರ್ಗಗಳು 37.1 ಕಿಮೀ ಡಬಲ್ ಡೆಕ್ಕರ್ ರಚನೆಗಳನ್ನು ಒಳಗೊಂಡಿರುತ್ತವೆ. ಫ್ಲೈಓವರ್ ಮೇಲೆ ಮೆಟ್ರೊ ಮಾರ್ಗವನ್ನು ಹೊಂದಿರುತ್ತದೆ. ಜಯದೇವ ಆಸ್ಪತ್ರೆಯಂತೆ ಮೈಸೂರು ರಸ್ತೆ ನಿಲ್ದಾಣವು ಆರು ಹಂತಗಳನ್ನು ಹೊಂದಿದ್ದರೂ, ಅದು ರೈಲು ಹಳಿ ಮಟ್ಟಕ್ಕಿಂತ ಎರಡು ಮೀಟರ್ಗಿಂತ ಹೆಚ್ಚು ಎತ್ತರವಿರುತ್ತದೆ.

ಗೋರಗುಂಟೆಪಾಳ್ಯ ಮತ್ತು ಮೈಸೂರು ರಸ್ತೆ ನಿಲ್ದಾಣಗಳು ಜಯದೇವ ಆಸ್ಪತ್ರೆ ನಿಲ್ದಾಣಕ್ಕಿಂತ ಎತ್ತರವಾಗಿರುತ್ತವೆ ಎಂದು ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಇದು ನಮ್ಮ ಮೆಟ್ರೊದ ಶಿಖರಕ್ಕೆ ಮತ್ತೊಂದು ಗರಿ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.