ಮಂಗಳವಾರ, ಜನವರಿ 18, 2022
23 °C

ಪೊಲೀಸರ ನೋಟಿಸ್; ಮುನವ್ವರ್ ಫಾರೂಕಿ ಕಾರ್ಯಕ್ರಮ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಭಾನುವಾರ (ನ. 28) ಸಂಜೆ ನಿಗದಿಪಡಿಸಿದ್ದ ಮುನವ್ವರ್ ಫಾರೂಕಿ ಅವರ ಸ್ಟ್ಯಾಂಡ್‌ ಅಪ್‌ ಕಾಮಿಡಿ ಕಾರ್ಯಕ್ರಮವನ್ನು ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ದಿಢೀರ್ ರದ್ದು ಮಾಡಲಾಗಿದೆ. ‘ಕಾರ್ಯಕ್ರಮದಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ’ ಎಂಬುದಾಗಿ ನೋಟಿಸ್‌ ನೀಡಿದ್ದ ಪೊಲೀಸರ ನಡೆಗೆ ಆಯೋಜಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಶೋಕನಗರ ಬಳಿಯ 'ಗುಡ್ ಶೆಫರ್ಡ್' ಸಭಾಂಗಣದಲ್ಲಿ ‘ಡೊಂಗ್ರಿ ಟು ನೋವೇರ್’ ಹೆಸರಿನಲ್ಲಿ ಕಾರ್ಯಕ್ರಮ ನಿಗದಿ
ಪಡಿಸಲಾಗಿತ್ತು. 600 ಮಂದಿ ಟಿಕೆಟ್‌ ಸಹ ಕಾಯ್ದಿರಿಸಿದ್ದರು.

ಕಾರ್ಯಕ್ರಮ ವಿರೋಧಿಸಿದ್ದ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು, ‘ಹಿಂದೂ ವಿರೋಧಿ ಆಗಿರುವ ಮುನವ್ವರ್ ಫಾರೂಕಿ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ದೂರು ಸಲ್ಲಿಸಿದ್ದರು.

ಓದಿ: ಕಾಮಿಡಿಯನ್‌ ಮುನಾವರ್‌ಗೆ ಮಧ್ಯಂತರ ಜಾಮೀನು

'ರದ್ದು ಮಾಡಿಸಲು ಬೆದರಿಕೆಯೇ ಕಾರಣ’

ಈ ಕುರಿತು ‘ಟ್ವೀಟ್’ ಮಾಡಿರುವ ಮುನವ್ವರ್ ಫಾರೂಕಿ, ‘ಕಾರ್ಯಕ್ರಮದಿಂದ ಯಾವುದೇ ಸಮಸ್ಯೆ ಇರಲಿಲ್ಲ. ಆದರೂ ರದ್ದುಪಡಿಸಲಾಗಿದೆ. ಇದು ನ್ಯಾಯಸಮ್ಮತವಲ್ಲ. ದಿಢೀರ್ ರದ್ದುಪಡಿಸುವುದರ ಹಿಂದೆ ಯಾರದ್ದೋ ಬೆದರಿಕೆ ಇರುವಂತೆ ಕಾಣಿಸುತ್ತಿದೆ’ ಎಂದಿದ್ದಾರೆ.

'ದೇಶದ ಜನತೆ ಕಾರ್ಯಕ್ರಮದ ಬಗ್ಗೆ ಅಪಾರ ಪ್ರೀತಿ, ಅಭಿಮಾನ ವ್ಯಕ್ತಪಡಿಸಿದ್ದರು. ಕಾರ್ಯಕ್ರಮದಿಂದ ಯಾವುದೇ ಸಮಸ್ಯೆ ಇಲ್ಲವೆಂಬ ಬಗ್ಗೆ ಸೆನ್ಸಾರ್‌ ಪ್ರಮಾಣ ಪತ್ರ ಸಹ ಇದೆ. ಕೆಲವರ ಬೆದರಿಕೆಯಿಂದಾಗಿ ಎರಡು ತಿಂಗಳಲ್ಲಿ 12 ಕಾರ್ಯಕ್ರಮಗಳು ರದ್ದು ಮಾಡಲಾಗಿದೆ’ ಎಂದೂ ಹೇಳಿದ್ದಾರೆ.

‘ನನ್ನ ಕಾರ್ಯಕ್ರಮದ ಆಯೋಜಕರ ತಂಡ, ತಿಂಗಳ ಹಿಂದಷ್ಟೇ ನಟ ಪುನೀತ್‌ ರಾಜಕುಮಾರ್‌ ಅವರ ಸಂಸ್ಥೆಗೆ ಸಂಬಂಧಪಟ್ಟವರನ್ನೂ ಭೇಟಿ ಆಗಿತ್ತು. ಕಾರ್ಯಕ್ರಮ ಬಗ್ಗೆ ಮಾತನಾಡಿತ್ತು’ ಎಂಬ ಸಂಗತಿಯನ್ನೂ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಓದಿ: ನ್ಯಾಯಾಂಗದ ಮೇಲೆ ವಿಶ್ವಾಸವಿದೆ: ಕಾಮಿಡಿಯನ್‌ ಮುನಾವರ್‌ ಫಾರುಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು