ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕಿರುನಾಟಕೋತ್ಸವದ ಫೈನಲ್‌ 15ಕ್ಕೆ

Last Updated 9 ಮೇ 2022, 16:16 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್‌ನ ಆಶ್ರಯದಲ್ಲಿ ‘ಬೆಂಗಳೂರು ಕಿರುನಾಟಕೋತ್ಸವ’ದಅಂತಿಮ ಸುತ್ತಿನ ಸ್ಪರ್ಧೆ ಮೇ 15ರಂದು ಸಂಜೆ 6.30ರಿಂದ ಹನುಮಂತನಗರದ ಪ್ರಭಾತ್ ಕೆ.ಎಚ್.ಕಲಾಸೌಧದಲ್ಲಿ ನಡೆಯಲಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ 15 ತಂಡಗಳ ಪೈಕಿ 6 ನಾಟಕಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿವೆ.

ಆಯ್ಕೆಯಾದ ನಾಟಕಗಳು: ವಿದಗ್ಧೆ (ಬೆಂಗಳೂರು ಥಿಯೇಟರ್ ಎನ್ಸೆಂಬಲ್), ಸಾಕ್ಷಾತ್ಕಾರ (ಅಂತರಂಗ ಬಹಿರಂಗ), ಅನಾಹುತ (ಮಣ್ಣು), ಸಹನ ಮೂರ್ತಿ (ಪ್ರಕಸಂ), ಕ್ಷಮ (ಕಲಾಕದಂಬ ಆರ್ಟ್‌ ಸೆಂಟರ್), ನಗರ ಪೂಜೆ (ರಂಗಚಿರಂತನ).

‘ಪ್ರಜಾವಾಣಿ’ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಪೆಂಟಗಾನ್ ಸ್ಪೇಸ್‌ ಸಂಸ್ಥೆಯ ಸಂಸ್ಥಾಪಕ ರವಿಶಂಕರ್ ಆರಾಧ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಬನಶಂಕರಿ ವಿ.ಅಂಗಡಿ, ಲೇಖಕಿ ಎಂ.ಎಸ್.ವಿದ್ಯಾ, ರಂಗ ನಿರ್ದೇಶಕ ಶ್ರೀಪಾದ ಭಟ್, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಪತ್ರಕರ್ತ ಜೋಗಿ, ಬರಹಗಾರ ಅಭಿಷೇಕ್ ಅಯ್ಯಂಗಾರ್, ನಟಿ ಸುಮನ್ ನಗರ್ಕರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ತೀರ್ಪುಗಾರರು ಮತ್ತು ಪ್ರೇಕ್ಷಕರಿಂದ ಆಯ್ಕೆಯಾಗುವ ಎರಡು ನಾಟಕಗಳಿಗೆ ‘ಅತ್ಯುತ್ತಮ ನಾಟಕ’ ಪ್ರಶಸ್ತಿ, ಸಂಚಾರಿ ವಿಜಯ್‌ ನೆನಪಾರ್ಥ ‘ಅತ್ಯುತ್ತಮ ನಟ’ ಪ್ರಶಸ್ತಿ, ಅತ್ಯುತ್ತಮ ನಟಿ, ವಿನ್ಯಾಸ, ನಿರ್ದೇಶನ, ಕಥೆ ಮತ್ತು ಭಿತ್ತಿಚಿತ್ರ ವಿನ್ಯಾಸ ಪ್ರಶಸ್ತಿಗಳ ಪ್ರದಾನವೂ ನಡೆಯಲಿದೆ.

ಹೆಚ್ಚಿನ ಮಾಹಿತಿಗೆ bengalurushortplayfestival@gmail.com ಅಥವಾ 9686869676 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT