ಬೆಂಗಳೂರು: ವಿದ್ಯುತ್ ಬಿಲ್ ಪಾವತಿಸಲು ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೆಸ್ಕಾಂ ವ್ಯಾಪ್ತಿಯ ಎಲ್ಲ ಉಪ ವಿಭಾಗಗಳ ನಗದು ಪಾವತಿ ಕೇಂದ್ರಗಳನ್ನು ರಜೆ ದಿನಗಳಾದ ಮಾರ್ಚ್ 29 (ಗುಡ್ ಫ್ರೈಡೆ) ಹಾಗೂ ಮಾರ್ಚ್ 31 (ಭಾನುವಾರ) ದಂದು ತೆರೆಯಲಾಗುತ್ತಿದೆ.

ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಉನ್ನತೀಕರಿಸುವ ಸಂಬಂಧ ಮಾರ್ಚ್ 10ರಿಂದ 19ರವರೆಗೆ ಆನ್‌ಲೈನ್ ವಿದ್ಯುತ್ ಸೇವೆಗಳು ಸ್ಥಗಿತಗೊಂಡಿದ್ದವು. ಈ ಅವಧಿಯಲ್ಲಿ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿರಲಿಲ್ಲ. ತಂತ್ರಾಂಶ ಕಾರ್ಯಾರಂಭಗೊಂಡ ನಂತರವೂ ಸರ್ವರ್ ಓವರ್‌ಲೋಡ್ ಆಗಿ ಆನ್‌ಲೈನ್ ಸೇವೆಗಳಲ್ಲಿ ವ್ಯತ್ಯಯವಾಗಿತ್ತು. ಹೀಗಾಗಿ, ಎರಡು ರಜಾ ದಿನಗಳಲ್ಲೂ ಬೆಸ್ಕಾಂನ ಎಲ್ಲಾ ಉಪ ವಿಭಾಗಗಳ ನಗದು ಪಾವತಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.