ಬುಧವಾರ, ಮೇ 25, 2022
31 °C

ಯುವ ಮೋರ್ಚಾ ‘ಭಾರತ ದರ್ಶನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಪದಾಧಿಕಾರಿಗಳಿಗೆ ‘ಭಾರತ ದರ್ಶನ– ಸುಶಾಸನ ಯಾತ್ರೆ’ ಆರಂಭಿಸಿದ್ದು, ಏ.4 ರವರೆಗೆ ಕರ್ನಾಟಕದಲ್ಲಿ ಕಾರ್ಯಕರ್ತರು ಪ್ರವಾಸ ನಡೆಸಲಿದ್ದಾರೆ. ಆ ಬಳಿಕ ಇತರ ರಾಜ್ಯಗಳಿಗೂ ಪ್ರವಾಸನಡೆಸಲಿದ್ದಾರೆ.

ಈ ಪ್ರವಾಸದಲ್ಲಿರುವ 16 ರಾಜ್ಯಗಳ 40ಕ್ಕೂ ಹೆಚ್ಚು ಪದಾಧಿಕಾರಿಗಳು ರಾಜ್ಯಕ್ಕೆ ಬಂದಿದ್ದಾರೆ. ರಾಜ್ಯ ಪ್ರವಾಸದಲ್ಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ತಂಡದ ಜತೆ ಸಮಾಲೋಚನೆ ನಡೆಸಿದರು.

ಸುಶಾಸನ ಯಾತ್ರೆಯು ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯಾಗಿದ್ದು, ದೇಶದ ಉದ್ದಗಲಕ್ಕೂ ಪ್ರವಾಸ ಮಾಡಿ ಅಲ್ಲಿನ ಜನಜೀವನ, ಪರಂಪರೆ, ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗಿದೆ ಎಂದು ಮೋರ್ಚಾ ತಿಳಿಸಿದೆ.

ಬೆಂಗಳೂರಿನಲ್ಲಿ ಎಚ್‌ಎಎಲ್, ಬಿಇಎಲ್‌, ಕಬ್ಬನ್‌ ಪಾರ್ಕ್‌, ನವೋದ್ಯಮ ಕಂಪನಿಗಳು, ಪಾವಗಡದ ಸೌರಶಕ್ತಿ ಪ್ಲಾಂಟ್‌ ಭೇಟಿ ನೀಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು