ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಮಹಿಳೆಯರಿಗಾಗಿ ಸ್ಥಾಪಿಸಿರುವ ‘ಭೂಮಿಕಾ ಕ್ಲಬ್’ ವೇದಿಕೆಯು ಮಾರ್ಚ್ 15ರಂದು ಮಧ್ಯಾಹ್ನ 2.30ಕ್ಕೆ ಇಂದಿರಾನಗರ ಕ್ಲಬ್ನಲ್ಲಿ 25ನೇ ಆವೃತ್ತಿಯ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

‘ಫ್ರೀಡಂ ಹೆಲ್ತಿ ಕುಕ್ಕಿಂಗ್ ಆಯಿಲ್’, ‘ಮಣಿಪಾಲ್ ಆಸ್ಪತ್ರೆಗಳ ಸಮೂಹ’ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಚಲನಚಿತ್ರ ನಟಿ, ಬಿಗ್ಬಾಸ್ ಸ್ಪರ್ಧಿ ಅನುಷಾ ರೈ ಉದ್ಘಾಟಿಸಲಿದ್ದಾರೆ. ವಿಚಾರಸಂಕಿರಣ ಹಾಗೂ ಸಂಗೀತ ಕಾರ್ಯಕ್ರಮ ಸೇರಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಪವಾನಿ ಡಿ. ಮತ್ತು ಭವಾನಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಪಶ್ಚಿಮ ವಿಭಾಗದ ‘ಸೆನ್’ ಎಸಿಪಿ ಉಮಾರಾಣಿ ಎಸ್. ಅವರು ಸೈಬರ್ ಅಪರಾಧದ ಕುರಿತು ಮಾಹಿತಿ ನೀಡಲಿದ್ದಾರೆ. ಮಹಿಳೆಯರ ಆರೋಗ್ಯದ ಬಗ್ಗೆ ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರು ತಿಳಿಸಿಕೊಡಲಿದ್ದಾರೆ.

‘ಉತ್ತರ ಕರ್ನಾಟಕ ಅಡುಗೆಮನೆ’ ಯುಟ್ಯೂಬ್ ಚಾನೆಲ್ನ ತ್ರಿವೇಣಿ ಅವರು ಅಡುಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಅಚ್ಚರಿ ಉಡುಗೊರೆ ಗೆಲ್ಲುವ ಅವಕಾಶವೂ ಇರಲಿದೆ. ಪ್ರವೇಶ ಉಚಿತವಾಗಿದ್ದು, ಹೆಸರು ನೋಂದಾಯಿಸಿದವರಿಗೆ ಮಾತ್ರ ಅವಕಾಶ ನೀಡಲಾಗಿದೆ.

ವಿವರಗಳಿಗಾಗಿ 7338018541 ಸಂಪರ್ಕಿಸಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.