ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತನಾಶೀಲ ನಾಯಕರ ರೂಪಿಸುವ ಬಯೋಸೈನ್ಸ್‌: ಕಿರಣ್ ಮಜುಂದಾರ್

ಚಾಣಕ್ಯ ಸ್ಕೂಲ್‌ ಆಫ್‌ ಬಯೋಸೈನ್ಸ್‌ ಉದ್ಘಾಟಿಸಿದ ಕಿರಣ್ ಮಜುಂದಾರ್ ಶಾ
Published 11 ಮೇ 2024, 15:51 IST
Last Updated 11 ಮೇ 2024, 15:51 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಪೀಳಿಗೆಯನ್ನು ಚಿಂತನಾಶೀಲ ನಾಯಕರನ್ನಾಗಿ ರೂಪಿಸಲು ಬಯೋಸೈನ್ಸ್‌ ಸಹಕಾರಿಯಾಗಲಿದೆ’ ಎಂದು ಬಯೋಕಾನ್‌ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ತಿಳಿಸಿದರು.‌

ಚಾಣಕ್ಯ ಸ್ಕೂಲ್‌ ಆಫ್‌ ಬಯೋಸೈನ್ಸ್‌ ಪ್ರಯೋಗಾಲಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದು ಶಿಕ್ಷಣ ಮತ್ತು ಸಂಶೋಧನೆಯನ್ನು ಹೆಚ್ಚಿಸುವುದಲ್ಲದೇ ಸಾಮೂಹಿಕ ಅನ್ವೇಷಣೆ ಹಾಗೂ ಆರೋಗ್ಯ ರಕ್ಷಣೆ, ಪರಿಸರ ಸುಸ್ಥಿರತೆಗೆ ಜಾಗತಿಕ ಸವಾಲುಗಳನ್ನು ಎದುರಿಸಲು ಒಂದು ದಿಟ್ಟ ಹೆಜ್ಜೆ ಎಂದು ಅವರು ಬಣ್ಣಿಸಿದರು.

ಸುಧಾರಿತ ಉಪಕರಣಗಳು ಮತ್ತು ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿರುವ ಬಯೋ ಸೈನ್ಸ್‌ನಲ್ಲಿ ಲ್ಯಾಬ್ ಜೀನೋಮಿಕ್ಸ್, ಬಯೋ ಎಂಜಿನಿಯರಿಂಗ್, ಡೀಸೆಲ್ ಬಯಾಲಜಿ, ಕಂಪ್ಯೂಟೇಷನಲ್ ಬಯಾಲಜಿ ಸಹಿತ ವಿವಿಧ ಚಟುವಟಿಕೆಗಳು ನಡೆಯಲಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT