ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಡಿತ ಭೀಮಸೇನ ಜೋಶಿ ಜನ್ಮಶತಮಾನೋತ್ಸವ: ಭೀಮಪಲಾಸ ಸಂಗೀತೋತ್ಸವ 19ಕ್ಕೆ

Last Updated 16 ಡಿಸೆಂಬರ್ 2021, 22:01 IST
ಅಕ್ಷರ ಗಾತ್ರ

ಬೆಂಗಳೂರು: ಪಂಡಿತ ಭೀಮಸೇನ ಜೋಶಿ ಜನ್ಮಶತಮಾನೋತ್ಸವದ ಪ್ರಯುಕ್ತಧಾರವಾಡದ ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆ ಇದೇ 19ರಂದು ನಗರದ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ 'ಭೀಮಪಲಾಸ’ ಸಂಗೀತೋತ್ಸವವನ್ನು ಜಂಟಿಯಾಗಿ ಆಯೋಜಿಸಿವೆ.

ಸಂಗೀತೋತ್ಸವವನ್ನು ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್‌ ಡಾ.ಬಿ.ಆರ್.ರವಿಕಾಂತೇಗೌಡ ಉದ್ಘಾಟಿಸಲಿದ್ದು, ಮುಂಬೈಎಲ್‌ಐಸಿಯ ಹೌಸಿಂಗ್ ಫೈನಾನ್ಸ್ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ಗೌಡ, ಜಂಟಿ ಪ್ರಧಾನ ವ್ಯವಸ್ಥಾಪಕ ಎನ್.ಮಹೇಶಮತ್ತು ಎಲ್‌ಐಸಿ ಹೈದರಾಬಾದ್ ವಲಯ ವ್ಯವಸ್ಥಾಪಕ ಎಂ.ಜಗನ್ನಾಥ ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆ.

ಪಂ. ಪ್ರವೀಣ್‌ ಗೋಡಖಿಂಡಿ ಮತ್ತು ಷಡಜ್ ಗೋಡಖಿಂಡಿ ಅವರ ಬಾನ್ಸುರಿ ಕಾರ್ಯಕ್ರಮದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ಸಿಗಲಿದೆ. ಸಿದ್ಧಾರ್ಥ ಬೆಳ್ಮಣ್ಣು ಬೆಳಗಿನ ರಾಗಗಳನ್ನು, ಪುಣೆಯ ಪಂ.ಆನಂದ ಭಾಟೆ ಹಾಗೂ ಸರೋದ್ ವಾದಕ ತೇಜೆಂದರ್‌ ಮಜುಮದಾರ್ ಮಧ್ಯಾಹ್ನದ ರಾಗಗಳನ್ನು, ವಿದುಷಿ ಸಾವನಿ ಶೇಂಡೆ ಸಂಜೆ ರಾಗಗಳನ್ನು ಪ್ರಸ್ತುತಪಡಿಸಲಿದ್ದಾರೆ. ಧಾರವಾಡದ ಪಂ.ಎಂ.ವೆಂಕಟೇಶ ಕುಮಾರ ಗಾಯನದೊಂದಿಗೆ ಸಂಗೀತೋತ್ಸವ ಸಂಪನ್ನಗೊಳ್ಳಲಿದೆ.

ಪಂ.ರವೀಂದ್ರ ಯಾವಗಲ್, ಪಂ.ರಾಜೇಂದ್ರ ನಾಕೋಡ, ಪಂ.ಓಜಸ್ ಅಧಿಯಾ, ರೂಪಕ ಕಲ್ಲೂರಕರ ತಬಲಾ ವಾದನ ನಡೆಸಿಕೊಡಲಿದ್ದಾರೆ. ವೆಂಕಟೇಶ ಪುರೋಹಿತ ತಾಳದಲ್ಲಿ, ಪಂ.ರವೀಂದ್ರ ಕಾತೋಟಿ ಮತ್ತು ಪಂ.ವ್ಯಾಸಮೂರ್ತಿ ಕಟ್ಟಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

ಧಾರವಾಡದ ವಿವಿಡ್‌ಲಿಪಿ ಸಂಸ್ಥೆಯು ಕಾರ್ಯಕ್ರಮವನ್ನು ನೇರ ಪ್ರಸಾರ(ಕೊಂಡಿ: http://www.youtube.com/vividlipi/live) ಮಾಡಲಿದೆ. ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳ ಅನುಸಾರ ನಡೆಯುವ ಈ ಕಾರ್ಯಕ್ರಮಕ್ಕೆ ಎರಡೂ ಲಸಿಕೆಗಳನ್ನು ಹಾಕಿಸಿಕೊಂಡಿರುವ ಪ್ರಮಾಣಪತ್ರ ಒದಗಿಸಿದವರಿಗೆ ಮಾತ್ರ ಪ್ರವೇಶಾವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT