ಬುಧವಾರ, ಸೆಪ್ಟೆಂಬರ್ 22, 2021
29 °C

ಬನ್ನೇರುಘಟ್ಟದಲ್ಲಿ ನೀರಾನೆಗೆ ಹುಟ್ಟುಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಮನೆಗಳಲ್ಲಿ ಮಕ್ಕಳಿಗೆ ಹುಟ್ಟುಹಬ್ಬ ಆಚರಿಸುವುದು ಸಾಮಾನ್ಯ. ಆದರೆ, ಪ್ರಾಣಿಗಳ ಹುಟ್ಟುಹಬ್ಬ ಅಪರೂಪ.

ಈ ದಿಸೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿಪ್ಪೋಪೊಟಮಸ್‌(ನೀರಾನೆ) ನಾಗ ಮತ್ತು ದಶ್ಯಾಳಿಗೆ ಜನಿಸಿದ ಮರಿಗೆ ಸನ್ನಿ ಎಂದು ನಾಮಕರಣ ಮಾಡಿ ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿದೆ.

ಹುಟ್ಟುಹಬ್ಬದ ಪ್ರಯುಕ್ತ ಮರಿಯನ್ನು ದತ್ತು ತೆಗೆದುಕೊಂಡಿದ್ದ ನಿಖಿಲ್‌ ಗುಪ್ತಾ ಮತ್ತು ನೇಹ ಅಗರ್‌ವಾಲ್‌ ಅವರು ಹಿಪ್ಪೋಪೊಟಮಸ್‌ಗಳಿಗೆ ವಿಶೇಷ ಆಹಾರ ನೀಡಿ ಹುಟ್ಟುಹಬ್ಬದ ಸಂಭ್ರಮಕ್ಕೆ ಮೆರುಗು ನೀಡಿದರು.

ಹಿಪ್ಪೋಪೊಟಮಸ್‌ ಪಾಲಕರಾದ ತಿಮ್ಮರಾಜು ಮತ್ತು ವೆಂಕಟೇಶ್‌ಗೆ ಪ್ರಶಂಸಾಪತ್ರ ನೀಡಿ ಗೌರವಿಸಲಾಯಿತು. ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ಸಿಂಗ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು