ಭಾನುವಾರ, ಜೂನ್ 20, 2021
20 °C

ಬಂಗಾಳದಲ್ಲಿ ರಾಜಕೀಯ ಅಪರಾಧೀಕರಣ: ಬಿ.ಎಲ್.ಸಂತೋಷ್ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳ ನಂತರ 7,300ಕ್ಕೂ ಹೆಚ್ಚು ಹಿಂಸಾಚಾರದ ಘಟನೆಗಳು ನಡೆದಿವೆ. ಘಟನೆಯಲ್ಲಿ ಹಲವು ಅಮಾಯಕರು ಬಲಿಯಾಗಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಆರೋಪಿಸಿದರು.

‘ಚುನಾವಣೆ ನಂತರ ಬಂಗಾಳದ ಪರಿಸ್ಥಿತಿ’ ಕುರಿತು ಸಂವಾದ ವತಿಯಿಂದ ಶುಕ್ರವಾರ ನಡೆದ ಆನ್‌ಲೈನ್‌ ಸಂವಾದದಲ್ಲಿ ಮಾತನಾಡಿದರು.

‘ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಸಂದರ್ಭದಲ್ಲಿ ಆರು ಸಾವಿರಕ್ಕೂ ಹೆಚ್ಚಿನ ಹಿಂಸಾಚಾರ ಘಟನೆಗಳು ನಡೆದಿದ್ದು, 40 ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್ ದಾಖಲಾಗಿದ್ದು, ಅಲ್ಲಿನ ಪೊಲೀಸ್ ವ್ಯವಸ್ಥೆ ರಾಜಕೀಯಕರಣಗೊಂಡಿದೆ. ಆಡಳಿತದ ರಾಜಕೀಯಕರಣ ಹಾಗೂ ರಾಜಕೀಯದ ಅಪರಾಧೀಕರಣವನ್ನು ಆ ರಾಜ್ಯದಲ್ಲಿ ಕಾಣಬಹುದು’ ಎಂದರು.

‘ಅಲ್ಲಿನ ಆಡಳಿತ ಹಾಗೂ ರಾಜಕೀಯಕ್ಕೆ ಭ್ರಷ್ಟಾಚಾರ ನೆಲೆ ನೀಡಿದೆ. ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಡಿ ನೀಡಿದ ಪಡಿತರ ಹಾಗೂ ಕೊರೊನಾ ಸಂದರ್ಭದಲ್ಲಿ ವಿತರಿಸಿರುವ ಪಡಿತರ, ಪರಿಹಾರವನ್ನು ಪಶ್ಚಿಮ ಬಂಗಾಳದ ಆಡಳಿತ ವ್ಯವಸ್ಥೆ ತಿಂದು ತೇಗಿದೆ. ಪಡಿತರ ಅಂಗಡಿಗಳ ಮಾಲೀಕರು ಹಾಗೂ ಪರಿಹಾರದ ಹಣ ನೀಡುವವರು ಟಿಎಂಸಿ ಪಕ್ಷದವರೇ ಆಗಿರುತ್ತಾರೆ’ ಎಂದು ಟೀಕಿಸಿದರು.

‘ಬಂಗಾಳದಲ್ಲಿ ಸ್ಥಳೀಯ ಮಟ್ಟದಲ್ಲಿರುವ ಅನೇಕ ಟಿಎಂಸಿ ನಾಯಕರು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರು. ಚುನಾವಣೆ ನಂತರದ ಹಿಂಸಾಚಾರದ ಹಿಂದೆ ಇದ್ದವರು ಮುಸ್ಲಿಂ ವಲಸಿಗರು’ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು