ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ‘ರಕ್ತದ ಆಕರಕೋಶ ದಾನಿಗಳ ಕೊರತೆ’

ನಾರಾಯಣ ಹೆಲ್ತ್‌ನ ಕಸಿ ತಜ್ಞ ಡಾ.ಸುನೀಲ್ ಭಟ್‌ ಕಳವಳ
Last Updated 26 ಮೇ 2022, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರಕೋಶ ನೆರವಾಗುತ್ತದೆ. ಶೇ 30 ರಷ್ಟು ರೋಗಿಗಳಿಗೆ ಮಾತ್ರ ಕುಟುಂಬದ ಸದಸ್ಯರಿಂದ ಈ ರಕ್ತದ ಆಕರಕೋಶ ಲಭ್ಯವಾಗುತ್ತಿದೆ’ ಎಂದು ನಾರಾಯಣ ಹೆಲ್ತ್‌ನ ಕಸಿ ತಜ್ಞ ಡಾ.ಸುನೀಲ್ ಭಟ್‌ ಕಳವಳ ವ್ಯಕ್ತ‌ಪಡಿಸಿದರು.

ರಕ್ತದ ಆಕರಕೋಶ ದಾನಿಗಳ ನೋಂದಣಿ ಸೇವಾ ಸಂಸ್ಥೆ ‘ಡಿಕೆಎಂಎಸ್-ಬಿಎಂಎಸ್‌ಟಿ ಫೌಂಡೇಷನ್’ ನಗರದಲ್ಲಿ ಗುರುವಾರ ಹಮ್ಮಿಕೊಂಡ ವಿಶ್ವ ರಕ್ತ ಕ್ಯಾನ್ಸರ್ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಕ್ತದ ಕ್ಯಾನ್ಸರ್ ಎದುರಿಸುತ್ತಿರುವವರಲ್ಲಿ ಶೇ 70 ರಷ್ಟು ರೋಗಿಗಳಿಗೆ ದಾನಿಗಳನ್ನು ಹುಡುಕಬೇಕಾಗುತ್ತದೆ ದೇಶದಲ್ಲಿ ರಕ್ತದ ಆಕರ ಕೋಶದಾನಿಗಳಾಗಿ ಕೇವಲ 5 ಲಕ್ಷ ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ. ದೇಶದಲ್ಲಿ ಪ್ರತಿ ವರ್ಷ 70 ಸಾವಿರ ಮಂದಿ ಮೃತಪಡುತ್ತಿದ್ದಾರೆ. 1 ಲಕ್ಷಕ್ಕೂ ಅಧಿಕ ಹೊಸ ರೋಗಿಗಳು ಪತ್ತೆಯಾಗುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT