ಶುಕ್ರವಾರ, ಫೆಬ್ರವರಿ 21, 2020
28 °C

ರಕ್ತದ ಆಕರಕೋಶ: ದಾನಿ ಭೇಟಿಯಾದ ಬಾಲಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಥಲಸ್ಸೇಮಿಯಾದಿಂದ ನರಳಿದ್ದ ಪಶ್ಚಿಮ ಬಂಗಾಳದ ನಾಲ್ಕು ವರ್ಷದ ಬಾಲಕಿ ತನಗೆ ರಕ್ತದ ಆಕರಕೋಶವನ್ನು ದಾನ ಮಾಡಿದ್ದ ನಗರದ ಟೆಕಿಯನ್ನು ಎರಡು ವರ್ಷಗಳ ಬಳಿಕ ಭೇಟಿ ಮಾಡಿ, ಧನ್ಯವಾದ ತಿಳಿಸಿದಳು. 

ವಿಶ್ವ ಕ್ಯಾನ್ಸರ್‌ ದಿನದ ಹಿನ್ನೆಲೆಯಲ್ಲಿ ಜಾಗತಿಕ ರಕ್ತದ ಆಕರಕೋಶ ದಾನಿಗಳ ನೋಂದಣಿ ಸೇವಾ ಸಂಸ್ಥೆ ‘ಡಿಕೆಎಂಎಸ್-ಬಿಎಂಎಸ್‌ಟಿ ಫೌಂಡೇ ಷನ್’ ಮಂಗಳವಾರ ಆಯೋಜಿಸಿದ್ದ ಕಾರ್ಯ ಕ್ರಮ ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು.

ಬಾಲಕಿ ಶಿಯಾ, ದಾನಿ  26 ವರ್ಷದ ದೆಬೋಜ್ಯೋತಿ ಅವರಿಗೆ ಕೃತಜ್ಞತೆ ಸಲ್ಲಿಸಿದಳು.

‘2016ರಲ್ಲಿ ಸ್ವ ಇಚ್ಛೆಯಿಂದ ರಕ್ತದ ಆಕರಕೋಶ ದಾನ ಮಾಡಲು ಹೆಸರು ನೋಂದಾಯಿಸಿದೆ. ನನ್ನ ರಕ್ತದ ಆಕರಕೋಶವನ್ನು ಯಾರಿಗೆ ನೀಡಲಾಗಿದೆ ಎಂಬುದು ತಿಳಿದಿರಲಿಲ್ಲ. ನನ್ನಿಂದ ಪುಟ್ಟ ಬಾಲಕಿಯ ಕಾಯಿಲೆ ಶಮನವಾಗಿರುವುದು ಅತೀವ ಸಂತೋಷವನ್ನುಂಟು ಮಾಡಿದೆ’ ಎಂದು ದೆಬೋಜ್ಯೋತಿ ತಿಳಿಸಿದರು. 

ಶಿಯಾಳ ತಂದೆ ಸೈಫುಲ್ಲ ಮಾತನಾಡಿ, ‘ರಕ್ತದ ಆಕರ ಕೋಶದ ಕಸಿಯ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲದ ಪರಿಣಾಮ ನಿರಾಸೆಗೆ ಒಳಗಾಗಿದ್ದೆವು. ರಕ್ತದ ಆಕರಕೋಶ ಕಸಿಯಿಂದ ಥಲಸ್ಸೇಮಿಯಾ ಕಾಯಿಲೆಯನ್ನು ಗುಣಪಡಿಸಬಹುದು ಎಂಬುದು ತಿಳಿಯಿತು. ಒಂದು ವರ್ಷದಲ್ಲಿಯೇ ಹೊಂದಾಣಿಕೆಯಾಗುವ ರಕ್ತದ ಆಕರಕೋಶ ದೊರೆಯಿತು’ ಎಂದರು. 

ಡಿಕೆಎಂಎಸ್‌– ಬಿಎಂಎಸ್‌ಟಿ ಫೌಂಡೇಷನ್ ನಿರ್ದೇಶಕಿ ಡಾ.ಲತಾ ಜಗನ್ನಾಥನ್, ‘ಕ್ಯಾನ್ಸರ್‌ಗೆ ರಕ್ತದ ಆಕರಕೋಶ ಕಸಿ ಪರಿಹಾರವಾಗಿದೆ. ನಮ್ಮಲ್ಲಿ 40 ಸಾವಿರ ದಾನಿಗಳು ಹೆಸರು ನೋಂದಣಿ ಮಾಡಿಸಿದ್ದಾರೆ. ಜನತೆಯಲ್ಲಿ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಬೇಕು‘ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)