ಆರ್.ವಿ. ರಸ್ತೆ ನಿಲ್ದಾಣದಲ್ಲಿ ಎಫ್‌ಒಬಿ ನಿರ್ಮಾಣ

ಶುಕ್ರವಾರ, ಜೂಲೈ 19, 2019
24 °C

ಆರ್.ವಿ. ರಸ್ತೆ ನಿಲ್ದಾಣದಲ್ಲಿ ಎಫ್‌ಒಬಿ ನಿರ್ಮಾಣ

Published:
Updated:

ಬೆಂಗಳೂರು: ‘ನಮ್ಮ ಮೆಟ್ರೊ’ದ ಆರ್.ವಿ. ರಸ್ತೆ ನಿಲ್ದಾಣದಲ್ಲಿ ಸದ್ಯದಲ್ಲಿಯೇ ಪಾದಚಾರಿ ಮೇಲ್ಸೇತುವೆ (ಎಫ್‌ಒಬಿ) ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ. ಇದಕ್ಕಾಗಿ ನಿಲ್ದಾಣದ ಒಂದು ಭಾಗವನ್ನು ಕೆಡವಲಾಗುತ್ತದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಅಧಿಕಾರಿ ತಿಳಿಸಿದರು. 

ನಿಲ್ದಾಣದ ದಕ್ಷಿಣ ಭಾಗದಿಂದ ಪ್ಲಾಟ್‌ಫಾರಂಗೆ ತೆರಳಲು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶ
ದಿಂದ ಈ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. 

‘ನಮ್ಮ ಮೆಟ್ರೊ’ದ ಎರಡನೇ ಹಂತದಲ್ಲಿ, ಆರ್‌.ವಿ. ರಸ್ತೆ – ಬೊಮ್ಮಸಂದ್ರ (ರೀಚ್‌ 5) ಮಾರ್ಗ ವಿಸ್ತರಣೆ ಮಾಡುತ್ತಿರುವುದರಿಂದಲೂ ಇಲ್ಲಿ ಅಂತರ್‌ನಿಲ್ದಾಣ ನಿರ್ಮಿಸಲಾಗುತ್ತಿದೆ. ಈ ಮಾರ್ಗದ ಪ್ರಯಾಣಿಕರು ಈ ಮೇಲ್ಸೇತುವೆಯ ಮೂಲಕ ಪ್ಲಾಟ್‌ಫಾರಂ ತಲುಪಬಹುದಾಗಿದೆ.

‘ನಿಲ್ದಾಣದ ಒಂದು ಭಾಗವನ್ನು ನೆಲಸಮಗೊಳಿಸುವ ಕಾರ್ಯವನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಾಗುತ್ತದೆ. ಅಂದರೆ, ರೈಲು ಸಂಚಾರ ಕಾರ್ಯಾಚರಣೆಗೆ ಹೆಚ್ಚು ತೊಂದರೆಯಾಗದ ರೀತಿಯಲ್ಲಿ ಈ ಕಾಮಗಾರಿ ನಡೆಸಲಾಗುವುದು. ಅಂತಿಮ ಹಂತದಲ್ಲಿ, ಪ್ರಯಾಣಿಕರಿಗೆ ತೊಂದರೆಯಾಗಬಹುದು’ ಎಂದು ನಿಗಮದ ಅಧಿಕಾರಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !