ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷ: ಬಿಎಂಟಿಸಿ ಬಸ್‌ ಸಂಚಾರ ಅವಧಿ ವಿಸ್ತರಣೆ

Last Updated 30 ಡಿಸೆಂಬರ್ 2019, 22:50 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವರ್ಷದಿಂದ ಬೆಂಗಳೂರು ಮೆಟ್ರೊ ರೈಲು ನಿಗಮವು ಮೆಟ್ರೊ ರೈಲುಗಳ ಸಂಚಾರ ಅವಧಿಯನ್ನು ರಾತ್ರಿ 12ರವರೆಗೆ ವಿಸ್ತರಿಸಿದ್ದು, ಇದಕ್ಕೆ ಪೂರಕವಾಗಿ ಪ್ರಮುಖ ಮೆಟ್ರೊ ನಿಲ್ದಾಣಗಳ ಬಳಿ ರಾತ್ರಿ 12ರ ನಂತರವೂ ಬಸ್‌ ಸೇವೆ ಒದಗಿಸಲು ಬಿಎಂಟಿಸಿ ಮುಂದಾಗಿದೆ.

ವಿಜಯನಗರ ಮೆಟ್ರೊ ನಿಲ್ದಾಣದಿಂದ ಬನಶಂಕರಿಯ ಕಡೆಗೆ ರಾತ್ರಿ 12.20, ಉಳ್ಳಾಲು ಉಪನಗರದ ಕಡೆಗೆ ರಾತ್ರಿ 12.25ಕ್ಕೆ ಕೊನೆಯ ಬಸ್‌ ಹೊರಡಲಿದೆ. ಮೈಸೂರು ರಸ್ತೆ ಬಸ್‌ ನಿಲ್ದಾಣದಿಂದ ಕೆಂಗೇರಿ ಕಡೆಗೆ ರಾತ್ರಿ 12.30, ಬಿಇಎಂಎಲ್‌ 5ನೇ ಹಂತದ ಕಡೆಗೆ ರಾತ್ರಿ 12.25ಕ್ಕೆ, ಬನಶಂಕರಿ ನಿಲ್ದಾಣದಿಂದ ಕಗ್ಗಲಿಪುರ ಕಡೆಗೆ ರಾತ್ರಿ 12.20ಕ್ಕೆ ಕೊನೆಯ ಬಸ್‌ ಹೊರಡಲಿದೆ.

ಜಯನಗರ ಮೆಟ್ರೊ ನಿಲ್ದಾಣದಿಂದ ವಡ್ಡರಹಳ್ಳಿ ಕಡೆಗೆ ರಾತ್ರಿ 11, ಜಂಬೂಸವಾರಿ ದಿಣ್ಣೆಯ ಕಡೆಗೆ ರಾತ್ರಿ 12.35ಕ್ಕೆ, ಗೊರಗುಂಟೆಪಾಳ್ಯ ನಿಲ್ದಾಣದಿಂದ ವಿದ್ಯಾರಣ್ಯಪುರದ ಕಡೆಗೆ ರಾತ್ರಿ 12.35, ಜಾಲಹಳ್ಳಿ ನಿಲ್ದಾಣದಿಂದ ವಿದ್ಯಾರಣ್ಯಪುರದ ಕಡೆಗೆ ರಾತ್ರಿ 12.30ಕ್ಕೆ ಕೊನೆಯ ಬಸ್‌ ಹೊರಡಲಿದೆ.

ನಾಗಸಂದ್ರ ನಿಲ್ದಾಣದಿಂದ ಚಿಕ್ಕಬಾಣಾವರ ಕಡೆಗೆ ರಾತ್ರಿ 12.34, ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೊ ನಿಲ್ದಾಣದಿಂದ ವೈಟ್‌ಫೀಲ್ಡ್‌ ಕಡೆಗೆ ರಾತ್ರಿ 35, ಕೆ.ಆರ್.ಪುರದಿಂದ ರಾತ್ರಿ 12.35, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಕಡೆಗೆ ರಾತ್ರಿ 12.30ಕ್ಕೆ ಕೊನೆಯ ಬಸ್‌ ಹೊರಡಲಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT