‘ಅಭ್ಯರ್ಥಿಯು ವಾಂತಿ ಮಾಡಲು ಶೌಚಾಲಯಕ್ಕೆ ಹೋಗುವುದಾಗಿ ಕೊಠಡಿ ಮೇಲ್ವಿಚಾರಕರಿಗೆ ತಿಳಿಸಿ ಹೋಗಿ ಚೀಟಿಗಳನ್ನು ತಂದಿದ್ದಾರೆ. ಅಭ್ಯರ್ಥಿಯು ಅಕ್ರಮ ಎಸಗಿರುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವರದಿ ನೀಡಲಾಗಿದೆ. ಕೆಇಎಯವರು ಕ್ರಮ ಜರುಗಿಸುವರು’ ಎಂದು ಪರೀಕ್ಷೆ ನೋಡಲ್ ಅಧಿಕಾರಿ ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.