ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಂಟಿಸಿ ಹೆಚ್ಚುವರಿ ಬಸ್ ಸಂಚಾರಕ್ಕೆ ಚಾಲನೆ

Published 20 ಫೆಬ್ರುವರಿ 2024, 16:02 IST
Last Updated 20 ಫೆಬ್ರುವರಿ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಹಾಗೂ ಹೊರ ವಲಯದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಬಿಎಂಟಿಸಿಯು ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ ಸಂಚಾರವನ್ನು ಆರಂಭಿಸಿದೆ. 

ಸರ್ಜಾಪುರದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಸರ್ಜಾಪುರ, ದೊಡ್ಡಕನ್ನಲ್ಲಿ, ಬೆಳ್ಳಂದೂರು ಗೇಟ್, ಸರ್ಜಾಪುರ ರಸ್ತೆ ಜಂಕ್ಷನ್, ಮಾರತ್‌ಹಳ್ಳಿ ಸೇತುವೆ, ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿತ್ಯ ನಾಲ್ಕು ವಾಯುವಜ್ರ ಬಸ್‌ಗಳು 14 ಟ್ರಿಪ್‌ ಸಂಚರಿಸಲಿವೆ.

ಸರ್ಜಾಪುರದಿಂದ ದೊಡ್ಡಕನ್ನಲ್ಲಿ, ಬೆಳ್ಳಂದೂರು ಗೇಟ್, ಸರ್ಜಾಪುರ ರಸ್ತೆ ಜಂಕ್ಷನ್, ಮಾರತ್‌ಹಳ್ಳಿ ಬ್ರಿಡ್ಜ್ ಮಾರ್ಗವಾಗಿ ಹೆಬ್ಬಾಳಕ್ಕೆ 4 ವಜ್ರ ಬಸ್‌ಗಳು ನಿತ್ಯ 16 ಟ್ರಿಪ್‌ ಹಾಗೂ ಶಿವಾಜಿನಗರದಿಂದ ಶಾಂತಿನಗರ, ಹುಳಿಮಾವು ಮಾರ್ಗವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ 4 ವಜ್ರ ಬಸ್‌ಗಳು ನಿತ್ಯ 30 ಟ್ರಿಪ್‌ ಸಂಚರಿಸಲಿವೆ.

ಸಾಮಾನ್ಯ ಸಾರಿಗೆ ಬಸ್‌ಗಳು ಸರ್ಜಾಪುರ ಬಸ್‌ ನಿಲ್ದಾಣ ಹೆಬ್ಬಾಳ, ದೊಮ್ಮಸಂದ್ರ, ಕೊಡತಿ ಗೇಟ್‌, ದೊಡ್ಡಕನ್ನಲ್ಲಿ, ಕಾಡುಬೀಸನಹಳ್ಳಿ, ಮಾರತ್‌ಹಳ್ಳಿ ಬ್ರಿಡ್ಜ್ ಹಾಗೂ ಶಿವಾಜಿನಗರ ಬಸ್‌ ನಿಲ್ದಾಣ, ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌ ಶಾಂತಿನಗರ ಟಿಟಿಎಂಸಿ, ಡೈರಿ ಸರ್ಕಲ್‌, ಗುರಪ್ಪನಪಾಳ್ಯ, ಗೊಟ್ಟಿಗೆರೆ ಮಾರ್ಗದಲ್ಲಿ ಸಂಚರಿಸಲಿವೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಈ ಹೊಸ ಮಾರ್ಗಗಳಿಗೆ ಮಂಗಳವಾರ ಚಾಲನೆ ನೀಡಿದರು. ಬಿಎಂಟಿಸಿ ಅಧ್ಯಕ್ಷ ಬಿ.ಶಿವಣ್ಣ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್., ನಿರ್ದೇಶಕಿ ಶಿಲ್ಪಾ ಭಾಗವಹಿಸಿದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT